July 13, 2026

ಮಂಗಳೂರು-ಬೆಂಗಳೂರು ರೈಲು ಪ್ರಾರಂಭವಾದ ಬೆನ್ನಲ್ಲೆ ಮೂರನೇ ಭಾರಿ ಭೂಕುಸಿತ: ರೈಲು ಸಂಚಾರ ಸ್ಥಗಿತ

0
image_editor_output_image10571498-1723803195832.jpg

ಹಾಸನ: ವಾರದ ಹಿಂದೆ ಸಕಲೇಶಪುರ ಹಾಗೂ ಬಳ್ಳುಪೇಟೆ ಬಳಿ ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಮಣ್ಣು ಕುಸಿದು ರೈಲು ಸಂಚಾರ ಸಂಪೂರ್ಣ ಬಂದ್ ಆಗಿತ್ತು, ಬಳಿಕ ಮಣ್ಣು ತೆರವು ಮಾಡಿ ರೈಲು ಸಂಚಾರ ಆರಂಭ ಬಳಿಕ ಇದೀಗ ಮತ್ತೆ ಮಣ್ಣು ಕುಸಿತವಾಗಿದೆ.

ಸಕಲೇಶಪುರ ತಾಲ್ಲೂಕಿನ ಆಚಂಗಿ-ದೊಡ್ಡಸಾಗರ ಬಳಿ ರೈಲ್ವೆ ಹಳಿ ಮೇಲೆ ಭೂಕುಸಿತ ಉಂಟಾಗಿ ಬೆಂಗಳೂರು-ಮಂಗಳೂರು ನಡುವಿನ ರೈಲುಗಳ ಸಂಚಾರ ಸ್ಥಗಿತವಾಗಿದೆ. ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ಇಂದು ವ್ಯತ್ಯಯವುಂಟಾಗಿದೆ.

ಕಳೆದ ಒಂದು ವಾರದ ಹಿಂದೆ ಇದೇ ಜಾಗದಲ್ಲಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿತ್ತು. ಮಣ್ಣು ತೆರವು ಕಾರ್ಯಾಚರಣೆ ಮುಗಿದು ರೈಲ್ವೆ ಸಂಚಾರ ಆರಂಭವಾದ ಬಳಿಕ ಇದೀಗ ಮತ್ತೆ ಮಣ್ಣು ಕುಸಿದು ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ ರೈಲು ಕಳೆದ ಒಂದು ಗಂಟೆಯಿಂದ ಬಾಳ್ಳುಪೇಟೆ ಬಳಿ ನಿಂತುಕೊಂಡಿದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ತೆರಳುತ್ತಿದ್ದ ಪ್ರಯಾಣಿಕರು ರೈಲು ಸಂಚಾರ ಸ್ಥಗಿತವಾಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದು

Leave a Reply

Your email address will not be published. Required fields are marked *

You may have missed

error: Content is protected !!