ನಡುರಸ್ತೆಯಲ್ಲೇ ಯುವಕನಿಗೆ ಬೆಲ್ಟ್ ನಿಂದ ಥಳಿಸಿದ ವಿದ್ಯಾರ್ಥಿನಿ: ವಿಡಿಯೋ ವೈರಲ್
ಶಾಲಾ ಸಮವಸ್ತ್ರ ತೊಟ್ಟಿರುವ ಬಾಲಕಿಯೊಬ್ಬಳು ನಡು ರಸ್ತೆಯಲ್ಲೇ ಯುವಕನನ್ನು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿದೆ
ವಿಡಿಯೋದಲ್ಲಿ ಬಾಲಕಿ ಯವಕನಿಗೆ ಮನಬಂದಂತೆ ಬೆಲ್ಟ್ನಲ್ಲಿ ಬಾರಿಸುತ್ತಿರುವುದನ್ನು ಕಾಣಬಹುದು. ಯುವಕ ಕೆಲದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಮನನೊಂದ ವಿದ್ಯಾರ್ಥಿನಿ ಯುವಕನಿಗೆ ನಡುರಸ್ತೆಯಲ್ಲಿ ಥಳಿಸಿರುವುದಾಗಿ ವರದಿಯಾಗಿದೆ. ಈ ಘಟನೆ ಅಹ್ಮದಾಬಾದ್‍ನಲ್ಲಿ ನಡೆದಿದೆ.
ಈ ವಿಡಿಯೊದಲ್ಲಿ , ಯುವಕ ನಡು ರಸ್ತೆಯಲ್ಲಿ ಬಿದ್ದಿದ್ದು, ಶಾಲಾ ಸಮವಸ್ತ್ರ ಧರಿಸಿದ ಬಾಲಕಿಯೊಬ್ಬಳು ಬೆಲ್ಟ್ ನಿಂದ ಹೊಡೆಯುತ್ತಿದ್ದರೆ, ಇನ್ನೊಬ್ಬಳು ಅಲ್ಲಿ ನಿಂತಿದ್ದ ಜನರ ಮುಂದೆ ಆತನ ನೀಚತನವನ್ನು ಬಯಲಿಗೆಳೆಯುತ್ತಿದ್ದಾಳೆ. ಇದೀಗ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಲೈಂಗಿಕ ಕಿರುಕುಳ ನೀಡುವವರನ್ನು ಇದೇ ರೀತಿ ನಡು ರಸ್ತೆಯಲ್ಲೇ ಅವಮಾನಿಸಬೇಕು, ಮಹಿಳೆಯರು ಯಾವತ್ತೂ ಮಾನ ಮಾರ್ಯದೆಗೆ ಅಂಜಿ ಹಿಂಜರಿಯಬಾರದು” ಎಂದು ನೆಟ್ಟಿಗರೊಬ್ಬರು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.





