March 24, 2026

ವಿಟ್ಲ: ರಿಕ್ಷಾ ಚಾಲಕ-ಮಾಲಕರಿಂದ ಸ್ವಾತಂತ್ರ್ಯೋತ್ಸವ ಆಚರಣೆ

0
Screenshot_20240816-185414_Gallery.jpg

ವಿಟ್ಲ: ಅಟೋ ಚಾಲಕರ ಮತ್ತು ಮಾಲಕರ ಸೌಹಾರ್ದ ಸಂಘ (ರಿ) ಆರ್. ಸಿ. ಎಂ. ಎಸ್ ವಿಟ್ಲ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಟ್ಲ ಶಾಲಾ ರಸ್ತೆಯ ರಿಕ್ಷಾ ನಿಲ್ದಾಣದಲ್ಲಿ ವಿಟ್ಲ ಪೊಲೀಸ್ ಠಾಣೆಯ ಎ.ಎಸ್.ಐ ಚಂದ್ರಹಾಸ ಶೆಟ್ಟಿ ಧ್ವಜಾರೋಹಣ ಮಾಡುವ ಮೂಲಕ ಜರಗಿತು.

ಅರ್. ಸಿ. ಎಂ.ಎಸ್. ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಅಂಗಡಿ ಮಾಲೀಕರು, ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿ ರಾಷ್ಟ್ರಗೀತೆ ಹಾಡಿ ದೇಶಪ್ರೇಮ ಮೆರೆದರು. ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಮಕ್ಕಳಿಗೆ ಹಾಗೂ ನೆರೆದವರಿಗೆ ಸಿಹಿತಿಂಡಿ ವಿತರಣೆ ಹಾಗೂ ವಿಟ್ಲದ ಪ್ರಮುಖ ಬೀದಿಗಳಲ್ಲಿ ಬೃಹತ್ ರಿಕ್ಷಾ ರ್ಯಾಲಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!