February 1, 2026

ಸರಕಾರಿ ಉರ್ದು ಶಾಲೆ ಮೂಲರಪಟ್ಣ ಇದರ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಾಗೂ ವಿವಿಧ ಸಂಘ ಸಂಸ್ಥೆಗಳಿಗೆ ಸನ್ಮಾನ ಕಾರ್ಯಕ್ರಮ

0
IMG-20240816-WA0004.jpg

ಬಂಟ್ವಾಳ: ತಾಲೂಕಿನ ಅರಳ ಗ್ರಾಮದ ಸರಕಾರಿ ಉರ್ದು ಶಾಲೆ ಹಾಗೂ ಮೌಲಾನ ಅಝಾದ್ ಮಾದರಿ ಶಾಲೆ ಮೂಲರಪಟ್ಣ ಇದರ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಬಹಳ ಅದ್ಧೂರಿಯಾಗಿ ನಡೆಯಿತು.

ಧ್ವಜಾರೋಹಣ ಕಾರ್ಯಕ್ರಮ ಬೆಳಗ್ಗೆ 9.30ಕ್ಕೆ ಸರಿಯಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಅರಳ ಇವರ ಘನ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಅರಳ ಗ್ರಾಮ ಪಂಚಾಯತ್ ಸದಸ್ಯರಾದ ಜ! ಎಮ್ ಬಿ ಅಶ್ರಫ್,ಹಮೀದ ಭಾನು
ಜಿ. ಎಚ್ ಎಮ್ ಫೌಂಡೇಶನ್ (ರಿ) ಇದರ ಅಧ್ಯಕ್ಷರಾದ ಜ! ಮೊಹಮ್ಮದ್ ಶಾಲಿ, ಸ್ಥಾಪಕಾಧ್ಯಕ್ಷ ಹಂಝ ಗುತ್ತು, ಪ್ರಮುಖರಾದ ಝಕರಿಯ್ಯ ಪರ್ವಿಝ್,ಎಮ್ ಬಿ ಇಸ್ಮಾಯಿಲ್ ಶಾಫಿ, ತೌಹೀದ್ ಎಮ್ ಬಿ, ಮುನೀರ್ ಅಝಾದ್ ನಗರ, ನಿಸಾರ್ ಅಹಮದ್ ಕಾಜಿಗುಳಿ, ‌ಅಬ್ದುಲ್ ರಶೀದ್, ಶಾರೂಕ್ ಎಮ್ ಬಿ ಹಿರಿಯರಾದ ಎಮ್ ಇಬ್ರಾಹಿಂ, ಎಮ್ ಮೊಹಮ್ಮದ್,ಮಯ್ಯದ್ದಿ ಎಂ, ಇಬ್ರಾಹಿಂ ಗುತ್ತು, ಅಬ್ದುಲ್ ಜಬ್ಬಾರ್ ಎಮ್ ಪಿ ಅಬ್ದುಲ್ ಖಾದರ್ ಅರಳ, ಆಝಾದ್ ಲಯನ್ಸ್ ಮುಖ್ಯಸ್ಥರಾದ ಶೆರೀಫ್ ಆಝಾದ್ ನಗರ ಹಾಗೂ ಶಿಕ್ಷಕರು, ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

ಉರ್ದು ಶಾಲೆಯ ಪ್ರಗತಿಗೆ ಬೆನ್ನೆಲುಬಾಗಿ ಸದಾ ಸಹಕಾರ ನೀಡುತ್ತಿರುವ ಜಿ.ಎಚ್.ಎಮ್ ಪೌಂಡೇಶನ್ (ರಿ), ಬೀಯಿಂಗ್ ಹ್ಯೂಮನ್ ವಾಟ್ಸಾಪ್ ಗ್ರೂಪ್, ಆಝಾದ್ ಲಯನ್ಸ್ ಹೆಲ್ಪ್ ಲೈನ್ ಮುಂತಾದ ಪ್ರಮುಖ ಸ್ಥಳೀಯ ಸಂಘ ಸಂಸ್ಥೆಗಳಿಗೆ ಅರ್ಹವಾಗಿಯೇ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲಾ ಪ್ರಗತಿಯಲ್ಲಿ ನಿರಂತರ ಪ್ರಯತ್ನ, ಶ್ರಮ ಪಡುತ್ತಿರುವ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಅರಳ ಇವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಶಾಹಿನ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ದಿವ್ಯ.ಯು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!