September 19, 2026

ಸುಳ್ಯ: ಪಾದಚಾರಿಗೆ ಲಾರಿ ಡಿಕ್ಕಿ: ಪುತ್ತೂರಿನ ವ್ಯಕ್ತಿ ಮೃತ್ಯು

0
image_editor_output_image440367897-1789835794319

ಸುಳ್ಯ:ವಿನೋಭಾನಗರದಲ್ಲಿ ಲಾರಿ ಡಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಸೆ.19ರ ಸಂಜೆ ನಡೆದಿದೆ.

ಮೃತರನ್ನು ಪುತ್ತೂರು ಕೋಡಿಪಾಡಿ ನಿವಾಸಿ ದೀಪಕ್ ಎನ್.ಎಂದು ಗುರುತಿಸಲಾಗಿದೆ.

ಪ್ರಕಾರ, ಬಂಟ್ವಾಳ ಕೆದಿಲ ನಿವಾಸಿ ಅಬ್ದುಲ್ ಲತೀಫ್** ಅವರು KA-01-AM-2449 ನೋಂದಣಿಯ ಲಾರಿಯನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ದೀಪಕ್ ಅವರಿಗೆ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!