March 18, 2026

ಜಿ.ಎಚ್. ಎಮ್ ಫೌಂಡೇಶನ್(ರಿ) ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಸ್ಥಳೀಯ ಶಾಲಾ ಕಾಲೇಜುಗಳಿಗೆ ಸಿಹಿತಿಂಡಿ ವಿತರಣೆ

0
IMG-20240816-WA0006.jpg

ಬಂಟ್ವಾಳ: ಹಲವಾರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಬಲೀಕರಣ ಕಾರ್ಯಕ್ರಮದಲ್ಲಿ ಸದಾ ಮುಂಚೂಣಿಯಲ್ಲಿರುವ ಜಿ.ಎಚ್. ಎಮ್ ಫೌಂಡೇಶನ್(ರಿ) ಮೂಲರಪಟ್ಣ ಇದರ ವತಿಯಿಂದ ಅದ್ದೂರಿಯಾಗಿ 78 ನೇಯ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಧ್ವಜಾರೋಹಣ ಕಾರ್ಯಕ್ರಮ ಬೆಳಗ್ಗೆ 8.30 ಕ್ಕೆ ಸರಿಯಾಗಿ ಸಂಸ್ಥೆಯ ಪ್ರಧಾನ ಕಛೇರಿ ಮುಂಭಾಗದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಎಚ್. ಎಮ್ ಫೌಂಡೇಶನ್(ರಿ) ಮೂಲರಪಟ್ಣ ಇದರ ಗೌರವಾನ್ವಿತ ಅಧ್ಯಕ್ಷರಾದ ಜ! ಮೊಹಮ್ಮದ್ ಶಾಲಿ ವಹಿಸಿದ್ದರು.

ಮೂಲರಪಟ್ಣ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಎಮ್ ಬಿ ಅಶ್ರಫ್, ಖತೀಬರಾದ ಅಲ್ಹಾಜ್ ಮೊಹಮ್ಮದ್ ಶೆರೀಫ್ ದಾರಿಮಿ, ಜಿ.ಎಚ್. ಎಮ್ ಫೌಂಡೇಶನ್(ರಿ) ಮುಖ್ಯಸ್ಥರಾದ ಜ! ಹಂಝ ಗುತ್ತು, ಹೀವೆಂಟ್ ಹೆಡ್ ಜ! ಎಮ್ ಬಿ ಇಸ್ಮಾಯಿಲ್ ಶಾಫಿ,ಝಕರಿಯ್ಯ ಪರ್ವಿಝ್, ತೌಹೀದ್ ಎಮ್ ಬಿ, ಮುನೀರ್ ಅಝಾದ್ ನಗರ ,ನಿಸಾರ್ ಅಹಮದ್ ಕಾಜಿಗುಳಿ,‌ಅಬ್ದುಲ್ ರಶೀದ್ ಆಚಾರಿಬೆಟ್ಟು, ಮೊಹಮ್ಮದ್ ಶಾರೂಕ್ ಹಾಗೂ ಇತರ ಎಲ್ಲಾ ಸದಸ್ಯರು ಮತ್ತು ಸ್ಥಳೀಯ ಮದ್ರಸದ ಅಧ್ಯಕ್ಷರು ಹಾಗೂ ಉಸ್ತಾದರು ಉಪಸ್ಥಿತರಿದ್ದರು.
ಜಿ.ಎಚ್. ಎಮ್ ಫೌಂಡೇಶನ್(ರಿ) ಪ್ರಧಾನ ಕಾರ್ಯದರ್ಶಿ ಜ! ಸಜೀವುದ್ದೀನ್ ಎಮ್ ಎಸ್ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!