ಈದ್ ಮಿಲಾದ್ ಸಮಿತಿ ಪುತ್ತೂರು ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಇಬ್ರಾಹಿಂ ಸಾಗರ್, ಪ್ರ.ಕಾರ್ಯದರ್ಶಿಯಾಗಿ ಖಾದರ್ ಕಬಕ
.
ಪುತ್ತೂರು: ಕಲ್ಲೇಗ ಜಲಾಲಿಯಾ ಮಸೀದಿಯ ಮದ್ರಸ ಸಭಾಂಗಣದಲ್ಲಿ ದ.ಕ ಜಿಲ್ಲಾ ಮುಸ್ಲಿಂ ಯುವ ಜನ ಪರಿಷತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೀಲಾದ್ ಸಮಿತಿಯನ್ನು ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಇಬ್ರಾಹಿಂ ಸಾಗರ್, ಪ್ರಧಾನ ಕಾರ್ಯದರ್ಶಿ ಖಾದರ್ ಕಬಕ, ಜೊತೆ ಕಾರ್ಯದರ್ಶಿ ಗಳಾಗಿ ರಶೀದ್ ಮುರ, ಹಾಗೂ ಅಜೀಜ್ ಬಪ್ಪಲಿಗೆ, ಕೋಶಾಧಿಕಾರಿಯಾಗಿ ಇಕ್ಬಾಲ್ ಬಪ್ಪಲಿಗೆ, ಉಪಾಧ್ಯಕ್ಷರಾಗಿ ಅಶ್ರಫ್ ಮುಕ್ವೆ ಹಾಗೂ ಹಂಝ ವಿದ್ಯಾಪುರ ಆಯ್ಕೆಯಾಗಿದ್ದಾರೆ




