February 1, 2026

SYS ಕನ್ಯಾನ ಸರ್ಕಲ್ ವತಿಯಿಂದ ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ

0
IMG-20240816-WA0008.jpg

ಕನ್ಯಾನ: 78 ನೇ ಸ್ವಾತಂತ್ರೋತ್ಸವದ ಪ್ರಯುಕ್ತ SYS ಕನ್ಯಾನ ಸರ್ಕಲ್ ಸಮಿತಿಯ ವತಿಯಿಂದ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿರುವ ಕನ್ಯಾನ ಕರೋಪಾಡಿ ವ್ಯಾಪ್ತಿಯ ಹತ್ತು ಮಂದಿ ಮೆಸ್ಕಾಂ ಸಿಬ್ಬಂದಿಗಳನ್ನು ಸ್ಮರಣಿಕೆ ಮತ್ತು ಶಾಲು ಹೊದಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಕೆ.ಎಂ ಅಶ್ರಫ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಸಲೀಂ ಅಂಗ್ರಿ, ಕೋಶಾಧಿಕಾರಿ ಲತೀಫ್ ಬಾಳಕೋಡಿ, ಸಾಂತ್ವನ ವಿಭಾಗ ಕಾರ್ಯದರ್ಶಿ ಅಬ್ದುಲ್ ಖಾದರ್ ಸಅದಿ, ಕಾರ್ಯಕಾರಣಿ ಸದಸ್ಯರಾದ ಅಶ್ರಫ್ ಮದನಿ, ಅಬ್ದುಲ್ ಖಾದರ್ ಫುರ್ಖಾನಿ ಹಾಗೂ ಸಂಘಟನಾ ಸದಸ್ಯರಾದ ರಹೀಂ ಚೆಡವು, ರಶೀದ್ ಅಂಗ್ರಿ, ಕನ್ಯಾನ ಮುಸ್ಲಿಂ ಜಮಾಅತ್ ಸದಸ್ಯರಾದ ಅಬೂಬಕ್ಕರ್ ಸಿದ್ದೀಖ್ ಪೊಯ್ಯಕಂಡ, ಇಸ್ಮಾಯಿಲ್ ಕಾಣಿಚ್ಚಾರ್, ಸಿದ್ದೀಖ್ ಎಸ್ಟಿಕೆ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!