October 17, 2026

ಮಿತ್ತೂರು ದಾರುಲ್ ಇರ್ಶಾದ್ ಅಧೀನದ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಹ್ ಕೊಡಮಾಡುವ ಫಿದಾಕ್ ಅವಾರ್ಡ್ ಗೆ ಎಸ್. ಪಿ ಹಂಝ ಸಖಾಫಿ ಆಯ್ಕೆ

0
image_editor_output_image-202864492-1792208246233

ಬಂಟ್ವಾಳ : ಮಿತ್ತೂರು ದಾರುಲ್ ಇರ್ಶಾದ್ ಅಧೀನದ ವಿದ್ಯಾರ್ಥಿ ಸಂಘಟನೆ  ಮುಈನುಸ್ಸುನ್ನಹ್ ಇದರ ವತಿಯಿಂದ ಪ್ರತಿವರ್ಷ ಕೊಡಮಾಡುವ “ಫಿದಾಕ್ ಅವಾರ್ಡ್” ಗೆ ಈ ಬಾರಿ ಎಸ್. ಪಿ. ಹಂಝ ಸಖಾಫಿ ಬಂಟ್ವಾಳ ಆಯ್ಕೆಯಾಗಿದ್ದಾರೆ .

ಹಂಝ ಸಖಾಫಿ ಅವರು ಕಾಸರಗೋಡಿನ ನೆಲ್ಲಿಕ್ಕುನ್ನು ವಿನಲ್ಲಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ ಬಳಿ ಎಂಟು ವರ್ಷ,  ಮೂರು ವರ್ಷ ಮರ್ಕಝಿನಲ್ಲಿ ಅಧ್ಯಯನ ನಡೆಸಿ 1992 ರಲ್ಲಿ ‘ಸಖಾಫಿ’ ಪದವಿ ಪಡೆದು ಕಾಸರಗೋಡಿನ ಮುಹಿಮ್ಮಾತಿನಲ್ಲಿ ಮ್ಯಾನೇಜರ್ ಮತ್ತು ಮುದರ್ರಿಸರಾಗಿ, ಮಂಗಳೂರಿನ ಅಝ್ಹರಿಯ್ಯಾ ದಲ್ಲಿ ಮುದರ್ರಿಸರಾಗಿ, ಅಲ್ ಅನ್ಸಾರ್ ವಾರಪತ್ರಿಕೆಯ ಸಂಪಾದಕರಾಗಿ, ಮೊಯ್ಲಾಂಜಿ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ, ಎಸ್‌ಎಸ್‌ಎಫ್ ನ ರಾಜ್ಯಾಧ್ಯಕ್ಷರಾಗಿ, ಎಸ್‌ವೈಎಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಗಿ, ಸುನ್ನೀ ಜಂಇಯ್ಯತುಲ್ ಉಲಮಾ ಕರ್ನಾಟಕ ಇದರ ಕಾರ್ಯದರ್ಶಿಯಾಗಿ, ಕರ್ನಾಟಕ ಮುಸ್ಲಿಮ್ ಜಮಾಅತ್ ಇದರ ರಾಜ್ಯ ಉಪಾಧ್ಯಕ್ಷರಾಗಿ, ಅಲ್ ಖಾದಿಸಾ ಕಾವಳಕಟ್ಟೆ ಇದರ ಪ್ರಧಾನ ಕಾರ್ಯದರ್ಶಿಯಾಗಿ, ಮಾಣಿ ದಾರುಲ್  ಇರ್ಶಾದ್  ಇದರ ಪ್ರಧಾನ ಕಾರ್ಯದರ್ಶಿ ಯಾಗಿ,  ಕೌಡೇಲು ದಾರುಲ್ ಇಝ್ಝ  ಇದರ ಅಧ್ಯಕ್ಷರಾಗಿ,  ಕಾವಳಕಟ್ಟೆ ಅಲ್ ಖಾದಿಸಾ ದಅವಾ ಕಾಲೇಜಿನ ಪ್ರಧಾನ ಮದರ‍್ರಿಸರಾಗಿ ಸೇವೆ ಸಲ್ಲಿಸಿದ್ದಾರೆ.

ಫಿಖ್‌ಹುಲ್ ಇಸ್ಲಾಮ್ ಭಾಗ 1, ಫಿಖ್‌ಹುಲ್ ಇಸ್ಲಾಮ್ ಭಾಗ 2, ಮುಸಾಫಿರನ ಸ್ವಗತಗಳು, ಯಾಸೀನ್ ವ್ಯಾಖ್ಯಾನ, ಹಜ್ಜ್ ಗೈಡ್, ಮಂಖೂಸ್ ಮೌಲಿದ್ ಅರ್ಥ ಮತ್ತು ವ್ಯಾಖ್ಯಾನ, ಪ್ರವಾದಿ ಮುಹಮ್ಮದ್ ಸಂಕ್ಷಿಪ್ತ ಚರಿತ್ರೆ, ರಮಳಾನ್ ಪ್ರಶ್ನೋತ್ತರಗಳು, ಹದ್ದಾದ್ ರಾತೀಬ್ ವ್ಯಾಖ್ಯಾನ, ಪ್ರವಾದಿ ಮುಹಮ್ಮದ್: ಪ್ರಶ್ನೋತ್ತರಗಳು ಮೊದಲಾದ ರಚನೆಗಳನ್ನು ರಚಿಸಿ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿರುವ  ಉಸ್ತಾದರು ಪ್ರಥಮ ಸುನ್ನೀ ಸಾಹಿತ್ಯ ಪ್ರಶಸ್ತಿ,  ದುಬಾಯಿಯಲ್ಲಿ ಶೈಖ್ ಝಾಯಿದ್ ಪ್ರಶಸ್ತಿ, ಮೈಮನ್ ಹೋಲಿ ಖುರ್ಆನ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಎಸ್.ಪಿ.ಹಂಝ ಸಖಾಫಿ ಉಸ್ತಾದ್ ಅವರನ್ನು ಫಿದಾಕ್ ಅವಾರ್ಡಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಮುಈನುಸ್ಸುನ್ನಹ್  ಸಂಘಟನೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!