March 24, 2026

ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿ ಮೇಲೆ ಹಲ್ಲೆ:  ಆರೋಪಿ ಬಂಟ್ವಾಳದ ಸಲೀಂ ಬಂಧನ

0
image_editor_output_image-1554230160-1723026795191

ಉಡುಪಿ  : ಉಡುಪಿ ದಕ್ಷಿಣ ಕನ್ನಡ ಗಡಿ ಭಾಗದ  ಹೆಜಮಾಡಿ ಟೋಲ್ ಗೇಟ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಆರೋಪಿಯನ್ನು ಪಡುಬಿದ್ರೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದ.ಕ. ಜಿಲ್ಲೆಯ ಬಂಟ್ವಾಳ ನಿವಾಸಿ ಸಲೀಂ ಬಂಧಿತ ಆರೋಪಿಯಾಗಿದ್ದಾನೆ.  ಹೆಜಮಾಡಿ ಟೋಲ್ ಗೇಟ್ ನ ಬಿಲ್ ಕಲೆಕ್ಟರ್ ದೀಕ್ಷಿತ್ ಹಲ್ಲೆಗೊಳಗಾದವರು. ಮಂಗಳವಾರ ಬೆಳಗ್ಗೆ ಮುಲ್ಕಿ ಕಡೆಯಿಂದ ಕಾರಿನಲ್ಲಿ ಹೆಜಮಾಡಿ ಟೋಲ್ ಗೇಟ್ ಗೆ ಬಂದ ಸಲೀಂ, ಟೋಲ್ ವಿನಾಯಿತಿ ಕೋರಿದ್ದಾನೆ. ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಬಿಲ್ ಕಲೆಕ್ಟರ್ ದೀಕ್ಷಿತ್ ಹೇಳಿದಾಗ ಕಾರನ್ನು ಅಪಾಯಕಾರಿಯಾಗಿ ಮುಂದಕ್ಕೆ ಚಲಾಯಿಸಿದ್ದಾನೆ. ಅಲ್ಲದೆ ಕಾರಿನಿಂದ ಇಳಿದು ಅವ್ಯಾಚವಾಗಿ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ದೀಕ್ಷಿತ್ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪಡುಬಿದ್ರೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!