ಉಡುಪಿ: ಹಾಡ ಹಗಲಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ: ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಜೋಡಿ
ಉಡುಪಿ : ನಗರದಲ್ಲಿ ಹಾಡ ಹಗಲಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ನಡೆದಿದೆ.
ಕವಿ ಮುದ್ದಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು, ಕಾರು ನಿಲುಗಡೆಗೊಳಿಸಿ ಒಳಭಾಗದಲ್ಲಿ ಹಾಡ ಹಗಲಲ್ಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವಕ ಮತ್ತು ಯುವತಿಯ ಜೋಡಿ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿರುವುದು, ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳಿಯರು ಇಣುಕಿ ನೋಡಿದಾಗ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ. ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಬಳಿಕ ಇಬ್ಬರು ಮುಜುಗರದಿಂದ ಪರಾರಿಯಾದರೆಂದು ತಿಳಿದುಬಂದಿದೆ. ಕಾರು ಕಳೆದ ಒಂದು ವಾರದಿಂದ ಅನುಮಾನಸ್ಪದವಾಗಿ ನಿಲ್ಲುತ್ತಿತ್ತು ಎಂದು ತಿಳಿದು ಬಂದಿದೆ.





