ಒಲಿಂಪಿಕ್ಸ್ ಹಾಕಿ ಸೆಮಿಫೈನಲ್: ಭಾರತವನ್ನು 3-2 ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ ಜರ್ಮನ್

ಪ್ಯಾರಿಸ್: ಒಲಿಂಪಿಕ್ಸ್ 2024 ರ ಹಾಕಿ ಸೆಮಿಫೈನಲ್ ನಲ್ಲಿ ಜರ್ಮನಿ ಭಾರತವನ್ನು 3-2 ಅಂತರದಿಂದ ಮಣಿಸಿದ್ದು, ಫೈನಲ್ ಪ್ರವೇಶಿಸಿದೆ.
ಫೈನಲ್ ನಲ್ಲಿ ಜರ್ಮನಿ ತಂಡ ನೆದರ್ ಲ್ಯಾಂಡ್ ತಂಡವನ್ನು ಎದುರಿಸಲಿದೆ. ಕೊನೆ ಕ್ಷಣದ ವರೆಗೂ ಭಾರತದ ಹಾಕಿ ತಂಡ ಅತ್ಯುತ್ತಮವಾಗಿ ಪಂದ್ಯವನ್ನಾಡಿತು. ಆದರೆ ಮಾರ್ಕೊ ಮಿಲ್ಟ್ಕೌ ಗಳಿಸಿದ ಗೋಲು ಪಂದ್ಯದ ದಿಕ್ಕನ್ನು ಬದಲಿಸಿತು.
ಜರ್ಮನಿ ಎದುರು ಪರಾಭವಗೊಂಡ ಭಾರತ ಈಗ ಕಂಚಿಕ ಪದಕಕ್ಕಾಗಿ ಸ್ಪೇನ್ ತಂಡದ ಜೊತೆಗೆ ಸೆಣೆಸಲಿದೆ.