ಕಾರವಾರ: ಕಾಳಿ ನದಿ ಸೇತುವೆಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಕುಸಿತ
ಕಾರವಾರ: ಕಾಳಿ ನದಿ ಸೇತುವೆಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆಯು ಕುಸಿದು ಬಿದ್ದಿದ್ದು, ಕಾರವಾರ-ಗೋವಾ ಸಂಚಾರ ತಾತ್ಕಾಲಿಕ ಬಂದ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರಾ.ಹೆ. 66ರಲ್ಲಿ 40 ವರ್ಷದ ಹಿಂದೆ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯು ಕುಸಿದು ಬಿದ್ದು, ತಮಿಳುನಾಡು ಮೂಲದ ಲಾರಿಯೊಂದು ನದಿಗೆ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಕಾಳಿ ನದಿಯ ಸೇತುವೆಯು ಮೂರು ಕಡೆಗಳಲ್ಲಿ ಕುಸಿದಿದೆ. ಕಾರವಾರದಿಂದ ಗೋವಾ ಕಡೆಗೆ ತೆರಳುವ ಮೊದಲ ಭಾಗ, ನಂತರ ಮಧ್ಯ ಭಾಗ, ಅದರ ನಂತರ ಗೋವಾದಿಂದ ಕಾರವಾರದ ಕಡೆ ಬರುವ ಪ್ರಾರಂಭದಲ್ಲಿ ಸೇತುವೆಯ ಮೇಲ್ಛಾವಣಿ ಹಾಸು ಕುಸಿದಿದೆ.





