ಬಿಳಿಯೂರಿನಲ್ಲಿ ಗುಡ್ಡ ಕುಸಿತ: ಅಪಾಯದಂಚಿನಲ್ಲಿ ಮನೆಗಳು, ಕೃಷಿ, ಗದ್ದೆ, ತೋಟ ಜಲಾವೃತ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ನೇತ್ರಾವತಿ ಮತ್ತು ಕುಮಾರಧಾರ ನದಿಗಳು ಅಪಾಯದ ಅಂಚಿನಲಿ ಹರಿಯುತ್ತಿದ್ದು, ನದಿ ಪಾತ್ರದ ಮನೆಗಳು ಜಲಾವೃತವಾಗುವ ಬೀತಿ ಎದುರಾಗಿದ್ದು ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಬಿಳಿಯೂರಿನಲ್ಲಿ ಅಲ್ಲಲ್ಲಿ ಭೂ ಕುಸಿತ ಉಂಟಾಗಿದ್ದು ಮತ್ತು ನದಿ ನೀರಿನ ಮಟ್ಟ ಏರಿಕೆಯಾಗಿ, ಕೃಷಿ ಭೂಮಿಗಳಿಗೆ ನೀರು ನುಗ್ಗಿದು ಬೆಳೆಗಳಿಗೆ ಹಾನಿಯಾಗಿದೆ. ನದಿಯ ಸಮೀಪ ಬಸೀರ್ ಎಂಬವರ ಮನೆಯ ಪಕ್ಕದಲ್ಲಿ ಗುಡ್ಡ ಕುಸಿದು ಬಿದ್ದು ವಿದ್ಯುತ್ ಕಂಬಗಳು ಧಾರಶಾಯಿಯಾಗಿದ್ದು,ಅದೃಷ್ಟವಶಾತ್ ಮನೆ ಹಾಗೂ ಮನೆಮಂದಿಗೆ ಯಾವುದೇ ಹಾನಿ ಸಂಭವಿಸಿಲ್ಲ ತಿಳಿದು ಬಂದಿದೆ.





