December 16, 2025

ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ(ರಿ) ಬೆಳ್ತಂಗಡಿ ತಾಲೂಕು ಘಟಕ: 2024-2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

0
IMG-20240730-WA0020.jpg

ಬೆಳ್ತಂಗಡಿ: ತಾಲೂಕು ವ್ಯಾಪ್ತಿಯ ಶಾಮಿಯಾನ ಮಾಲಿಕರ ಸಂಘದ ಮಹಾಸಭೆಯು ಶ್ರೀ ದೀಪಾ ಸಭಾಭವನ ಕೆದ್ದು-ಅಳದಂಗಡಿಯಲ್ಲಿ ಮಂಗಳವಾರ ನಡೆಯಿತು. ವೇದಿಕೆಯಲ್ಲಿ ದ‌.ಕ ಜಿಲ್ಲಾ ಶಾಮಿಯಾನ ಮಾಲಕರ ಅಧ್ಯಕ್ಷ ಬಾಬು ಕೆ ವಿಟ್ಲ, ಜಿಲ್ಲಾ ಕಾರ್ಯದರ್ಶಿ ನಿಶಿತ್ ಪೂಜಾರಿ, ಬೆಳ್ತಂಗಡಿ ಘಟಕ ಸ್ಥಾಪಕಾಧ್ಯಕ್ಷ ಲತೀಫ್ ಹಾಜಿ ಎಸ್.ಎಂ.ಎಸ್, ಕಾರ್ಯದರ್ಶಿ ಹರೀಶ್ ಕುಮಾರ್ ಗೇರುಕಟ್ಟೆ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಕಳೆದ ಸಾಲಿನ‌ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಶಾಮಿಯಾನ ಮಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಈ ಸಂದರ್ಭದಲ್ಲಿ 2024-2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.

ಅಧ್ಯಕ್ಷರಾಗಿ ಬಿ ಹರೀಶ್ ಕುಮಾರ್, ಜ್ಯೋತಿ ಶಾಮಿಯಾನ ಗೇರುಕಟ್ಟೆ
ಪ್ರಧಾನ ಕಾರ್ಯದರ್ಶಿಯಾಗಿ ಧರ್ಣಪ್ಪ ಮೂಲ್ಯ ನಾವೂರು ಭಾರತ್ ಶಾಮಿಯಾನ
ಉಪಾಧ್ಯಕ್ಷರಾಗಿ ಅರುಣ್ ಮೊರಾಸ್ ಎಸ್ ಪಿ ಎಸ್ ಶಾಮಿಯಾನ ಮಡಂತ್ಯಾರು, ರಾಜೇಂದ್ರ ಕುಮಾರ್, ಎಸ್ ಆರ್ ಶಾಮಿಯಾನ ವೇಣೂರು
ಜೊತೆ ಕಾರ್ಯದರ್ಶಿ ಕೆ .ಎಂ ಹಕೀಮ್ ತನಲ್ ಇವೆಂಟ್ ಸರಲಿಕಟ್ಟೆ

ಕೋಶಾಧಿಕಾರಿಯಾಗಿ ಜೋಸೆಫ್ ಕೆ. ಡಿ. ಅಭಿಲಾಷ್ ಶಾಮಿಯಾನ ಧರ್ಮಸ್ಥಳ
ಸಂಘಟನ ಕಾರ್ಯದರ್ಶಿಯಾಗಿ ಮನೋಹರ್ ಕುಮಾರ್ ಶ್ರೀ ದೇವಿ ಶಾಮಿಯಾನ ಎಸ್ ಎಮ್,
ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ಎ ಕೆ ಎ ಶಾಮಿಯಾನ ಕಕ್ಕಿಂಜೆ ಇವರನ್ನು ನೇಮಕ ಮಾಡಲಾಯಿತು.

ತಾಲೂಕಿನ ಪ್ರತಿಯೊಂದು ವಲಯಕ್ಕೆ ಈ ಕೆಳಕಂಡ ಸಂಚಾಲಕರನ್ನು ಆಯ್ಕೆ ಮಾಡಲಾಯಿತು
ಬೆಳ್ತಂಗಡಿ ವಲಯ – ಅವಿಲ್ ಡೇಸಾ
ಬಂಗಾಡಿ – ಉಮೇಶ್ ಗೌಡ
ಕಕ್ಕಿಂಜೆ – ತಿರುಮಲೇಶ್
ಧರ್ಮಸ್ಥಳ – ಸುಮಿತ್ರ
ಗೇರುಕಟ್ಟೆ – ಸುರೇಶ್ ಶ್ರೀ ದೇವಿ ಕೃಪಾ
ಕಲ್ಲೇರಿ – ಬಾಲಕೃಷ್ಣ ಶೆಟ್ಟಿ
ವೇಣೂರ್ – ಜಿನರಾಜ್ ಜೈನ್
ಅಳದಂಗಡಿ – ಪ್ರಭಾಕರ್ ಕುಲಾಲ್
ಸುಲ್ಕೆರಿ – ವಿಜೇತ್
ಮಡಂತ್ಯಾರು – ಲೆಸ್ಲಿ ಡಿಸೋಜಾ
ಅರಶಿನಮಕ್ಕಿ – ಅಶ್ವಥ್ ನಿಡ್ಲೆ

Leave a Reply

Your email address will not be published. Required fields are marked *

error: Content is protected !!