ವಿಟ್ಲ ರೋಟರಿ ಕ್ಲಬ್ ನೇತೃತ್ವದಲ್ಲಿ ಕಾರ್ಗಿಲ್ ವಿಜಯ ದಿವಸ್ ಸಂಭ್ರಮಾಚರಣೆ
ವಿಟ್ಲ: ರೋಟರಿ ಕ್ಲಬ್ ವಿಟ್ಲ ಮತ್ತು ವಿಠಲ ಎಜುಕೇಶನ್ ಸೊಸೈಟಿ (ರಿ) ವಿಟ್ಲ ಇದರ ಸಹಯೋಗದಲ್ಲಿ ಕಾರ್ಗಿಲ್ ವಿಜಯ ದಿವಸ್ ಸಂಭ್ರಮಾಚರಣೆ ವಿಠಲ ಪದವಿ ಪೂರ್ವ ಕಾಲೇಜು ಇಲ್ಲಿನ ಸುವರ್ಣ ರಂಗಮಂದಿರದಲ್ಲಿ ನಡೆಯಿತು.
25ನೇ ವರ್ಷದ ಸಂಭ್ರಮಾಚರಣೆಗೆ ಬಂಟ್ವಾಳ ತಾಲೂಕಿನಿಂದ ಸುಮಾರು 25 ಮಂದಿ ಮಾಜಿ ಸೈನಿಕರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ವಿಟ್ಲದ ಅಧ್ಯಕ್ಷರಾದ ಹರೀಶ್ ಪೂಜಾರಿಯವರು ವಹಿಸಿ ಅತಿಥಿ ಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಿಠಲ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿ ಸದಸ್ಯರಾದ ಶ್ರೀ ನಿತ್ಯಾನಂದ ನಾಯಕ್
Rtn ಡಾ ವಿ ಕೆ ಹೆಗ್ಡೆ ಪ್ರಾಂಶುಪಾಲರಾದ ಶ್ರೀ ಆದರ್ಶ ಚೊಕ್ಕಾಡಿ ಉಪ ಪ್ರಾಂಶುಪಾಲರಾದ Rtn ಕಿರಣ್ ಕುಮಾರ್ Rtn ದಾಸಪ್ಪ ಪೂಜಾರಿ Rtn ಧನಂಜಯ್ Rtn ಬಾಲಕೃಷ್ಣ ರೈ ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ವೆಂಕಪ್ಪ ಗೌಡ ಪುಣಚ ಮತ್ತು ಮಾಜಿ ಸೈನಿಕರು ವೇದಿಕೆಯಲ್ಲಿದ್ದರು. Rtn ಡಾ ವಿ .ಕೆ ಹೆಗ್ಡೆಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಸೋಮಶೇಖರ್ ವಂದನಾರ್ಪಣೆ ಸಲ್ಲಿಸಿದರು.
Rtn ಪ್ರಕಾಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.






