ನಿರ್ಮಾಪಕಿ ಸ್ವಪ್ನಾ ವರ್ಮಾ ನೇಣು ಬಿಗಿದು ಆತ್ಮಹತ್ಯೆ
ಹೈದ್ರಾಬಾದ್: ಟಾಲಿವುಡ್ ಇಂಡಸ್ಟ್ರಿಯಲ್ಲಿ ದುರಂತ ಸಂಭವಿಸಿದೆ. ಮಹಿಳಾ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ನಿರ್ಮಾಪಕಿ ಸ್ವಪ್ನಾ ವರ್ಮಾ (33) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಮಾದಾಪುರದಲ್ಲಿರುವ ಕಾವೂರಿ ಹಿಲ್ಸ್‌ನಲ್ಲಿರುವ ತನ್ನ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆರ್ಥಿಕ ತೊಂದರೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಸ್ವಪ್ಪಾ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಹುಟ್ಟೂರು ಆಂಧ್ರಪ್ರದೇಶದ ರಾಜಮಂಡ್ರಿ. ಇಂಡಸ್ಟ್ರಿಯಲ್ಲಿ ಮಿಂಚಬೇಕು ಎಂಬ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ಹೈದರಾಬಾದ್ ಗೆ ಬಂದಿದ್ದರು.
ಕಳೆದ ವರ್ಷ ಅವರು ಕಾವೂರಿ ಹಿಲ್ಸ್‌ನಲ್ಲಿರುವ ತಿಗಳ ಹೌಸ್ ಅಪಾರ್ಟಮೆಂಟ್‌ನ ಫ್ಲಾಟ್ 101 ರಲ್ಲಿ ವಾಸಿಸುತ್ತಿದ್ದರು. ಆದರೆ ಎರಡು ದಿನದಿಂದ ಆಕೆ ಹೊರಗೆ ಬಂದಿಲ್ಲ.
ಈ ನಡುವೆ ಆಕೆಯ ಕೊಠಡಿಯಿಂದ ವಾಸನೆ ಬಂದ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.





