May 5, 2026

ಮಂಗಳೂರು ಸಬ್ ಜೈಲಿನಲ್ಲಿ ಹೊಡೆದಾಟ: ಇಬ್ಬರು ಖೈದಿಗಳು ಆಸ್ಪತ್ರೆಗೆ ದಾಖಲು

0
image_editor_output_image-832477102-1719848596253

ಮಂಗಳೂರು ಸಬ್ ಜೈಲಿನಲ್ಲಿ ಖೈದಿಗಳ ನಡುವೆ ಮಾರಾಮಾರಿ ನಡೆದಿದ್ದು, ಇಬ್ಬರು ಗಾಯಗೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 20 ದಿನಗಳಿಂದ ವಿಚಾರಣಾಧೀನ ಖೈದಿಗಳಾಗಿ ಜೈಲು ಸೇರಿದ್ದ ಉಳ್ಳಾಲದ ಮಹಮ್ಮದ್ ಸಮೀರ್ ಹಾಗೂ ಮಹಮ್ಮದ್ ಮನ್ಸೂರ್ ಮೇಲೆ ಟೋಪಿ ನೌಫಾಲ್ ಹಾಗೂ ಇತರ ಹತ್ತು ರೌಡಿಗಳಿಂದ ಈ ದಾಳಿ ನಡೆಸಲಾಗಿದೆ.

ಸಂಜೆ 6.45ರ ಸುಮಾರಿಗೆ ಈ ಘಟನೆ ನಡೆದಿದ್ದು,ಜೈಲಿನ ಅಡುಗೆ ರೂಮಿನಲ್ಲಿ ಹರಿತವಾದ ವಸ್ತುಗಳಿಂದ ದಾಳಿ ನಡೆಸಲಾಗಿದೆ. ಹಲ್ಲೆಗೊಳಗಾದ ಇಬ್ಬರಿಗೂ ತಲೆ,ಭುಜ ಸೇರಿದಂತೆ ದೇಹದ ಹಲವೆಡೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಹಲ್ಲೆ ನಡೆಸಿದವರು ಹಾಗೂ ಹಲ್ಲೆಗೆ ಒಳಗಾದವರು ನಟೋರಿಯಸ್ ಗಳಾಗಿದ್ದು ಹಲವಾರು ಪ್ರಕರಣಗಳ ಆರೋಪಿಗಳಾಗಿದ್ದಾರೆ.
ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ವಿರುದ್ದ ಜೈಲರ್ ನೀಡಿದ ದೂರಿನ ಅನ್ವಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!