May 5, 2026

ವಿಟ್ಲ: ಲಿಫ್ಟ್ ಒಳಗಡೆ ಸಿಲುಕಿದ ವಿದ್ಯಾರ್ಥಿಗಳು: ವಿಟ್ಲದ ಬಹುಮಹಡಿ ಕಟ್ಟಡದಲ್ಲಿ ಘಟನೆ

0
image_editor_output_image-32337042-1719827867296

ವಿಟ್ಲ : ಸ್ವಿಫ್ಟ್ ಸ್ಪೇಸ್ ಎಲಿವೇಟರ್‍ಸ್‌ನಲ್ಲಿ ವಿದ್ಯಾರ್ಥಿಗಳು ಬಾಗಿಲು ಓಪನೆ ಆಗದೆ ಲಿಫ್ಟ್‌ನೊಳಗೆ ಸಿಲುಕಿದ ಘಟನೆ ವಿಟ್ಲ ಪುತ್ತೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ನಡೆದಿದೆ.

ವಿಟ್ಲ ಪುತ್ತೂರು ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಲಿಫ್ಟ್‌ನಲ್ಲಿ ಚಲಿಸುತ್ತಿದ್ದ ವಿದ್ಯಾರ್ಥಿಗಳು, ಎಷ್ಟು ಹೊತ್ತಾದರೂ ಲಿಫ್ಟ್‌ನ ಬಾಗಿಲು ತೆರೆಯದೇ ಅದರ ಒಳಗೆ ಸಿಲುಕಿದ್ದರು. ಈ ವೇಳೆ ವಿದ್ಯಾರ್ಥಿಗಳಲ್ಲಿ ಉಸಿರಾಟದ ತೊಂದರೆ ಕಂಡುಬಂದಿದ್ದು, ಕೂಡಲೇ ವಿದ್ಯಾರ್ಥಿಗಳು ತಮ್ಮ ಮನೆಯವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಕೂಡಲೇ ತಕ್ಷಣ ಸ್ಥಳಕ್ಕೆ ಧಾವಿಸಿ ಲಿಫ್ಟ್‌ನ ಬಾಗಿಲಿಗೆ ರಾಡ್‌ ಹಾಕಿ ಮೀಟಿ ಬಾಗಿಲು ತೆಗೆದು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನು ತಿಳಿಯಬೇಕಿದೆ.

ಈ ಹಿಂದೆ ಕೂಡ ಮಂಗಳೂರಿನ ಕೂಳೂರಿನಲ್ಲಿ ಸ್ವಿಫ್ಟ್ ಸ್ಪೇಸ್‌ ಸಂಸ್ಥೆಯ ಲಿಫ್ಟ್‌ನ ಚೈನ್ ಪುಲ್ಲಿ ತುಂಡಾಗಿ ಬಿದ್ದು ಕಾರ್ಮಿಕರಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿತ್ತು. ಇದೀಗ ಅದೇ ಸ್ವಿಫ್ಟ್ ಸ್ಪೇಸ್‌ ಸಂಸ್ಥೆಯ ತಾಂತ್ರಿಕ ದೋಷದಿಂದ ಲಿಫ್ಟ್‌ನಲ್ಲಿ ವಿದ್ಯಾರ್ಥಿಗಳು ಸಿಲುಕಿ ಸ್ಥಳೀಯರ ರಕ್ಷಣೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!