3 ದಿನಗಳಲ್ಲಿ 60 ಜನರನ್ನು ವಿವಾಹವಾದ ಮಹಿಳೆ
ಆಸ್ಟ್ರೇಲಿಯ: 40 ವರ್ಷದ ಕಾರ್ಲಿ ಸಾರೆ ಎಂಬ ಮಹಿಳೆಯ ಮದುವೆಯ ಸಂಬಂಧಿಸಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ವೃತ್ತಿಯಲ್ಲಿ ವೆಡ್ಡಿಂಗ್ ಫೋಟೋಗ್ರಾಫರ್ ಆಗಿರುವ ಈಕೆ ಮೂರು ದಿನಗಳ ತನ್ನ ವಿವಾಹ ಸಮಾರಂಭದಲ್ಲಿ ಒಟ್ಟು 60 ಜನರನ್ನು ವಿವಾಹವಾಗಿದ್ದಾಳೆ.
60 ರಲ್ಲಿ ಪುರುಷರು ಮತ್ತು ಮಹಿಳೆಯರೂ ಕೂಡ ಸೇರಿಸಿದ್ದಾರೆ. ಒಬ್ಬರನ್ನೇ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಳ್ಳದೆ 60 ಮಂದಿಯನ್ನು ಒಟ್ಟಿಗೆ ಆಯ್ಕೆ ಮಾಡಿ ಮದುವೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾರ್ಲಿ “ನನಗೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆಯಿದೆ. ನನ್ನ ಜೀವನದಲ್ಲಿ ಇವರೆಲ್ಲರೂ ಬಹಳ ಮುಖ್ಯ, ಹಾಗಾಗಿ ಅವರೆಲ್ಲರನ್ನೂ ಒಟ್ಟಿಗೆ ಮದುವೆಯಾಗಿದ್ದೇನೆ ” ಎಂದು ಹೇಳಿಕೊಂಡಿದ್ದಾಳೆ. ಸದ್ಯ ಈಕೆಯ ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.





