ರೀಲ್ಸ್ ಗಾಗಿ ಸಿಗರೇಟ್ ಸೇದಿದ ಯುವತಿ: ವೀಡಿಯೋ ನೋಡಿದ ತಂದೆಯಿಂದ ಯುವತಿಗೆ ಏಟು
ಪಶ್ಚಿಮ ಬಂಗಾಳ: ಯುವತಿಯೊಬ್ಬಳು ರೀಲ್ಸ್ ಮಾಡಿ ತಂದೆಯ ಕೈಯಿಂದ ಸರಿಯಾಗಿ ಹೊಡೆತ ತಿಂದಿರುವ ಘಟನೆ ನಡೆದಿದೆ. ಇದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ರೀಲ್ಸ್ ಗಾಗಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಿರುವ ವಿಡಿಯೋ ಮಾಡಿ ತಂದೆಯಿಂದ ಸರಿಯಾಗಿ ಏಟು ಕೂಡ ತಿಂದಿದ್ದಾಳೆ.
ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಶೋನಿ ಕಪೂರ್ ಹಂಚಿಕೊಂಡ ವೈರಲ್ ವಿಡಿಯೋದಲ್ಲಿ ಅಪ್ರಾಪ್ತ ಯುವತಿಯೊಬ್ಬಳು ರೀಲ್ಸ್ ಗಾಗಿ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೋ ಮಾಡಿದ್ದಾಳೆ. ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಇದು ಮನೆಯವರಿಗೆ ತಿಳಿದು ತಂದೆಯಿಂದ ಸಾಕಷ್ಟು ಏಟು ಕೂಡ ತಿಂದಳು.
ವೈರಲ್ ಆಗಿರುವ ವಿಡಿಯೋದ ಇನ್ನೊಂದು ಭಾಗದಲ್ಲಿ ಬೀದಿಯಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಅವಳ ತಂದೆ ಹೇಗೆ ಅವಳಿಗೆ ಬೆಲ್ಟ್‌ನಿಂದ ಹೊಡೆಯುತ್ತಿದ್ದಾರೆ ಎಂಬುದನ್ನು ನೋಡಬಹುದು.





