December 16, 2025

ಮಂಗಳೂರು: ಮನೆಯ ಮೇಲೆ ಕುಸಿದು ಬಿದ್ದ ಆವರಣಗೋಡೆ

0
image_editor_output_image-199963793-1719813807550.jpg

ಮಂಗಳೂರು: ನಗರದ ಹೊರವಲಯದ ಬಜಾಲ್‌ನ ಪಳ್ಳಕೆರೆ ಎಂಬಲ್ಲಿ ಸೈಟ್‌ನ ಆವರಣಗೋಡೆ ಕುಸಿದು ಬಿದ್ದು ಮನೆಯೊಂದಕ್ಕೆ ಹಾನಿಯಾಗಿರುವ ಘಟನೆ ರವಿವಾರ ನಡೆದಿದೆ.

ಅಪರಾಹ್ನ 3 ಗಂಟೆ ಹೊತ್ತಿಗೆ ಸುಧಾಕರ ಶೆಣೈ ಎಂಬವರಿಗೆ ಸೇರಿದ ಸೈಟ್‌ನ ಆವರಣಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಪಳ್ಳಕೆರೆಯ ರಾಧಾಕೃಷ್ಣ ಎಂಬವರ ಮನೆಗೆ ಹಾನಿಯಾಗಿದೆ.

ಸೈಟ್‌ನ ಆವರಣಗೋಡೆಯ ಮಣ್ಣು, ಕಲ್ಲು , ಸ್ಲಾಬ್ ಮನೆ ಹಾಗೂ ಬಚ್ಚಲು ಮನೆಯ ಮೇಲೆ ಬಿದ್ದಿದೆ. ಮನೆಯ ಒಂದು ಕೋಣೆಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಈ ಘಟನೆಯ ಹೊತ್ತಿಗೆ ಮನೆ ಮಂದಿ ಹೊರಗಿದ್ದರು. ಹೀಗಾಗಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!