March 20, 2026

ಶವರ್ಮಾದಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ಗಳು ಪತ್ತೆ: ಶವರ್ಮ ಬ್ಯಾನ್ ಮಾಡಲು ನಿರ್ಧಾರ

0
image_editor_output_image-1950088958-1719812980132.jpg

ಬೆಂಗಳೂರು: ಸುರಕ್ಷಿತ ನಿಯಮಗಳನ್ನು ಪಾಲಿಸದ ಶವರ್ಮಾ ತಯಾರಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಶವರ್ಮಾ ಆಹಾರ ಪದಾರ್ಥ ಸೇವಿಸಿ ಫುಡ್‌ ಪಾಯಿಸನ್‌ ಆಗಿರುವ ವರದಿಗಳ ಹಿನ್ನೆಲೆ ಬಿಬಿಎಂಪಿ, ಬೆಂಗಳೂರು ಗ್ರಾಮಾಂತರ, ಮೈಸೂರು, ತುಮಕೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಬಳ್ಳಾರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಾರಾಟ ಮಾಡಲಾಗುತ್ತಿರುವ ಕಡೆ 17 ಶವರ್ಮಾ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ.

ಇದರಲ್ಲಿ 9 ಮಾದರಿಗಳು ಸುರಕ್ಷಿತವಾಗಿದ್ದು, 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ಗಳು ಕಂಡು ಬಂದಿವೆ. ಹೀಗಾಗಿ ಅಸುರಕ್ಷಿತ ಎಂದು ದೃಢಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಆಹಾರ ತಯಾರಿಕೆ ಸಂದರ್ಭದಲ್ಲಿನ ನೈರ್ಮಲ್ಯದ ಕೊರತೆ, ದೀರ್ಘಕಾಲದಿಂದ ಸಂಗ್ರಹಿಸಿರುವುದು ಮತ್ತು ವಿತರಣೆಯ ಸಂದರ್ಭದಲ್ಲಿನ ನೈರ್ಮಲ್ಯ ಕೊರತೆಯಿಂದ ಬ್ಯಾಕ್ಟೀರಿಯಾ ಹಾಗೂ ಈಸ್ಟ್‌ಗಳು ಕಂಡು ಬರುತ್ತವೆ. ಹೀಗಾಗಿ ಎಲ್ಲಾ ಶವರ್ಮಾ ಆಹಾರ ತಯಾರಕರು ಆಹಾರ ಸುರಕ್ಷತಾ ನಿಯಮ ಪಾಲಿಸಬೇಕು.

Leave a Reply

Your email address will not be published. Required fields are marked *

error: Content is protected !!