ಕುಡಿಯಲು ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ ಪುತ್ರ
ದಾವಣಗೆರೆ: ಮದ್ಯ ಸೇವಿಸಲು ಹಣ ಕೊಡಲು ನಿರಾಕರಿಸಿದ ಹೆತ್ತ ತಾಯಿಯನ್ನೇ ಪಾಪಿ ಮಗನೊಬ್ಬ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ.
ಬುಳ್ಳಮ್ಮ(70) ಮಗನಿಂದಲೇ ಕೊಲೆಯಾದ ದುರ್ದೈವಿ. ಹನುಮಂತಪ್ಪ (35) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಹತ್ತು ಮಕ್ಕಳ ತಾಯಿಯಾದ ಬುಳ್ಳಮ್ಮ ಗಂಡ ತೀರಿಕೊಂಡ ಮೇಲೆ ಹತ್ತು ಮಕ್ಕಳನ್ನು ಕಷ್ಟಪಟ್ಟು ಬೆಳೆಸಿದ್ದಳು. 9 ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟು ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದಳು. ಆದರೆ ಪಾಪಿ ಮಗ ಹನುಮಂತ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ.
ಈ ಹಿಂದೆ ಹಣದ ವಿಚಾರವಾಗಿ ಸ್ನೇಹಿತನನ್ನೇ ಹನುಮಂತ ಕೊಲೆ ಮಾಡಿ, 7 ವರ್ಷ ಜೈಲುವಾಸ ಅನುಭವಿಸಿದ್ದ. ಮಗ ಜೈಲಿಗೆ ಹೋಗಿದ್ದರಿಂದ ನೊಂದ ಬುಳ್ಳಮ್ಮ ಹಾಸಿಗೆ ಹಿಡಿದಿದ್ದಳು. ಉಳಿದ 9 ಜನ ಹೆಣ್ಣು ಮಕ್ಕಳು ಹತ್ತು ಲಕ್ಷ ರೂ. ಖರ್ಚು ಮಾಡಿ ಜಾಮೀನಿನ ಮೇಲೆ ಅರೋಪಿಯನ್ನು ಜೈಲಿನಿಂದ ಕಳೆದ ಮೂರು ತಿಂಗಳ ಹಿಂದೆ ಹೊರಗೆ ತಂದಿದ್ದರು.




