November 13, 2026

ಶಿವಮೊಗ್ಗ: ಕೆರೆಗೆ ಬಿದ್ದಿದ್ದ ಹೋರಿ ರಕ್ಷಿಸಲು ಹೋಗಿ ಯುವಕ ಸಾವು

873ee318-5272-4ca0-ada3-c6da0c52015e

ಶಿವಮೊಗ್ಗ: ಕೆರೆಗೆ ಬಿದ್ದು ಒದ್ದಾಡುತ್ತಿದ್ದ ಹೋರಿ ರಕ್ಷಿಸಲು ಹೋಗಿ ಯುವಕನೊಬ್ಬ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲೂಕಿನ ಹುಣಸೇಕೊಪ್ಪದಲ್ಲಿ ನಡೆದಿದೆ.

ಅಶ್ರಫ್(22) ಮೃತ ದುರ್ದೈವಿ. ಈತ ಕಾರು ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಹಿತ್ತಲ ಗ್ರಾಮದ ಹೋರಿ ಹಬ್ಬ ಮುಗಿಸಿ ವಾಪಸ್ ತೆರಳುವಾಗ ಕೆರೆಗೆ ಬಿದ್ದಿದ್ದ ಹೋರಿ ರಕ್ಷಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಜೊತೆಗಿದ್ದ ಯುವಕರು ಅಶ್ರಫ್‌ ರಕ್ಷಣೆಗೆ ಯತ್ನಿಸಿದ್ದರು. ಆದರೆ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ಕುಟುಂಬಕ್ಕೆ ಆಧಾರವಾಗಿದ್ದ ಯುವಕ ಸಾವನ್ನಪ್ಪಿದ್ದು, ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ. ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

error: Content is protected !!