ಅಲ್ ಮುಝೈನ್” ಕಂಪೆನಿಗೆ ಸಮ್ರೆಫ್ ಪ್ಲಾಟಿನಂ ಅವಾರ್ಡ್: ಸೌದಿ ಅರೇಬಿಯಾದ ಯಾಂಬು ನಲ್ಲಿ ಪ್ರಶಸ್ತಿ ಸ್ವೀಕರಿಸಿದ ಝಕರಿಯಾ ಜೋಕಟ್ಟೆ ತಂಡ
ಸೌದಿ ಅರೇಬಿಯಾದ ಯಾಂಬು ನಲ್ಲಿ ಬುಧವಾರ (15-04) ನಡೆದ ಸಮ್ರೆಫ್ (samref) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪೆನಿ ಪ್ಲಾಟಿನಂ ವಿನ್ನರ್ ಪ್ರಶಸ್ತಿಯನ್ನು ಸ್ವೀಕರಿಸಿದೆ.
ಸುಮಾರು ಏಳು ಸಾವಿರಕ್ಕೂ ಅಧಿಕ ನೌಕರರನ್ನು ಹೊಂದಿರುವ ಅಲ್ ಮುಝೈನ್ ಕಂಪೆನಿ ತನ್ನ ಪಾರದರ್ಶಕ, ಕಠಿಣ ಹಾಗೂ ನಂಬಿಕಾರ್ಹ ಸಂಸ್ಥೆಯಾಗಿ ಬೆಳೆದುದನ್ನು ಪರಿಗಣಿಸಿ 2023ನೇ ಸಾಲಿನ ಸೇವೆಗಾಗಿ ಈ ಪ್ರಶಸ್ತಿ ನೀಡಲಾಗಿದೆ. ಅಲ್ ಮುಝೈನ್ ಸಿಇಒ ಝುಕರಿಯಾ ಬಜ್ಪೆ (ಜೋಕಟ್ಟೆ) ಮತ್ತವರ ತಂಡ ಈ ಬುಧವಾರ ಪ್ರಶಸ್ತಿಯನ್ನು ಪಡೆದರು.





