March 17, 2026

ಕಾಸರಗೋಡು: ಬೈಕ್ ಗಳ ನಡುವೆ ಅಪಘಾತ: ವಿದ್ಯಾರ್ಥಿ ತಸ್ಲೀಮ್ ಮೃತ್ಯು

0
image_editor_output_image360473184-1715770525046

ಕಾಸರಗೋಡು: ಬೈಕ್ ಗಳ ನಡುವೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ಚಟ್ಟಂಚಾಲ್ ನಲ್ಲಿ ನಡೆದಿದೆ.

ತೆಕ್ಕಿಲ್ ಬೆಂಡಿ ಚ್ಚಾಲ್ ನ ಮುಹಮ್ಮದ್ ತಸ್ಲೀಮ್ (20) ಮೃತ ವಿದ್ಯಾರ್ಥಿ.

ಚಟ್ಟಂಚಾಲ್ ಸಬ್ ಟ್ರೆಜರಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತ ತಸ್ಲೀಮ್ ಮಂಗಳೂರಿನ ಕಾಲೇಜೊಂದರ ವೈದ್ಯಕೀಯ ವಿದ್ಯಾರ್ಥಿಯಾಗಿದ್ದನು. ಈ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!