September 25, 2026

ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿ ನಿರ್ವಹಣಾ ಸಮಿತಿಗೆ ಅನುಮೋದನೆ ನೀಡಿ ರಾಜ್ಯ ವಕ್ಫ್ ಮಂಡಳಿ ಆದೇಶ : ನೂತನ ಅಧ್ಯಕ್ಷರಾಗಿ ಕೆ. ಮೊಯಿದಿನಬ್ಬ ಮತ್ತು ಉಪಾಧ್ಯಕ್ಷರಾಗಿ ಅಶ್ರಫ್ ನಾಡಾಜೆ,

0
image_editor_output_image-214290386-1790318829600

ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿ ನಿರ್ವಹಣಾ ಸಮಿತಿಗೆ ಅನುಮೋದನೆ ನೀಡಿ ರಾಜ್ಯ ವಕ್ಫ್ ಮಂಡಳಿ ಆದೇಶ : ನೂತನ ಅಧ್ಯಕ್ಷರಾಗಿ ಕೆ. ಮೊಯಿದಿನಬ್ಬ ಮತ್ತು ಉಪಾಧ್ಯಕ್ಷರಾಗಿ ಅಶ್ರಫ್ ನಾಡಾಜೆ, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್

ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮ ಮತ್ತು ಅಂಚೆ ವ್ಯಾಪ್ತಿಯ ಕುಕ್ಕಾಜೆಯ ಮುಹಿಯುದ್ದೀನ್ ಜುಮಾ ಮಸೀದಿ ವಕ್ಫ್ ಸಂಸ್ಥೆಯ ನಿರ್ವಹಣೆಗಾಗಿ 11 ಸದಸ್ಯರ ನಿರ್ವಹಣಾ ಸಮಿತಿಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ರಚಿಸಿ ಅನುಮೋದಿಸಿದೆ.ನೂತನ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಕೆ ಮೊಯಿದಿನಬ್ಬ, ಉಪಾಧ್ಯಕ್ಷರಾಗಿ ಅಶ್ರಫ್ ನಾಡಾಜೆ, ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್, ಕೋಶಾಧಿಕಾರಿಯಾಗಿ ಕೆ ಬಿ ಹಮೀದ್, ಸಮಿತಿಯ ಸದಸ್ಯರಾಗಿ ಬದ್ರುದ್ದೀನ್, ಬಿ ಉಮ್ಮರ್, ಅಹಮ್ಮದ್, ಕೆ ಮಹಮ್ಮದ್, ಕೆ ಮೊಯಿದು ಕುಂಞÂ, ಮಹಮ್ಮದ್ ಸೆಯ್ಯದ್ ಹಾಗೂ ಕೆ ಮಹಮ್ಮದ್ ಅವರನ್ನು ನೇಮಕಗೊಳಿಸಿ ರಾಜ್ಯ ವಕ್ಫ್ ಬೋರ್ಡ್ ಅನುಮೋದಿಸಿದೆ. ಕುಕ್ಕಾಜೆ ಮಸೀದಿಗೆ ಸಂಬಂಧಿಸಿದಂತೆ 01.02.2023ರ ಮಂಡಳಿ ಆದೇಶದಂತೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿತ್ತು. ಚುನಾವಣಾಧಿಕಾರಿಯು 02.01.2025ರಂದು ಚುನಾವಣಾ ವೇಳಾಪಟ್ಟಿ ಪ್ರಕಟಿಸಿ, 25.01.2025ರಂದು ಚುನಾವಣೆ ನಡೆಸಿದ್ದರು. ನಂತರ ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದಂತೆ ಹೈಕೋರ್ಟಿನಲ್ಲಿ ರಿಟ್ ಪಿಟಿಶನ್ 1426/2025 ರಂತೆ ಅರ್ಜಿ ಸಲ್ಲಿಕೆಯಾಗಿತ್ತು. ಹೈಕೋರ್ಟ್ 12.02.2026ರಂದು ಫಲಿತಾಂಶ ಪ್ರಕಟಿಸಲು ಚುನಾವಣಾಧಿಕಾರಿಗೆ ನಿರ್ದೇಶನ ನೀಡಿದ್ದು, ಅದರಂತೆ ಚುನಾವಣಾಧಿಕಾರಿ ಹಾಗೂ ವಕ್ಫ್ ಅಧಿಕಾರಿಗಳು ಈ ಫಲಿತಾಂಶ ಪ್ರಕಟಿಸಿದ್ದಾರೆ. ವಕ್ಫ್ ಬೋರ್ಡ್ ಆದೇಶ ಸಂಖ್ಯೆ ಕೆ ಎಸ್ ಬಿ ಎ/ಸಿಎಂಸಿ/35/ಡಿಕೆಡಿ/2016-17 ದಿನಾಂಕ 24.08.2026 ರಂತೆ ಈ 11 ಸದಸ್ಯರ ನಿರ್ವಹಣಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ಕುಕ್ಕಾಜೆ ಮುಹಿಯುದ್ದೀನ್ ಜುಮಾ ಮಸೀದಿ ನಿರ್ವಹಣೆಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಅನುಮೋದಿಸಿ ರಚಿಸಿದೆ. ಸಮಿತಿಯು ವಕ್ಫ್ ಕಾಯ್ದೆ, ಸಂಬಂಧಿತ ನಿಯಮಗಳು ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶನಗಳಂತೆ ಕಾರ್ಯನಿರ್ವಹಿಸಬೇಕು. ಸಮಿತಿಯು ಬ್ಯಾಂಕ್ ಖಾತೆ ವಿವರ, ಲೆಕ್ಕಪತ್ರ, ಆಡಿಟ್ ವರದಿ, ಆಸ್ತಿ ವಿವರ, ಬಾಡಿಗೆ/ ಲೀಸ್ ವಿವರ ಹಾಗೂ ಸಂಸ್ಥೆಯ ಬಜೆಟ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗಿದೆ ಎಂದು ರಾಜ್ಯ ವಕ್ಫ್ ಮಂಡಳಿ ಆದೇಶದಲ್ಲಿ ತಿಳಿಸಿದೆ ಎಂದು ವಕ್ಫ್ ಮಂಡಳಿ ನಿಯೋಜಿತ ಮಸೀದಿ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!