ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಬಳಿ ಮಾನವ ಬುರುಡೆ ಪತ್ತೆ: ಪೊಲೀಸರಿಗೆ ದೂರು
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪ ರಾಜ್ಯ ಹೆದ್ದಾರಿ ಬದಿಯಲ್ಲಿ ಮಾನವ ದೇಹದ ಬುರುಡೆಯೊಂದು ಪತ್ತೆಯಾಗಿದೆ.
ನವೆಂಬರ್ 12ರಂದು ಸಂಜೆ ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ತಮ್ಮ ಕೆಲಸದ ನಿಮಿತ್ತ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಿಗೆ ಅಡ್ಡವಾಗಿದ್ದ ಮರದ ರೆಂಬೆಗಳನ್ನು ಕತ್ತರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಮಾನವ ದೇಹದ ಬುರುಡೆಯೊಂದು ಕಂಡುಬಂದಿದೆ.
ಈ ಕುರಿತು ಅವರು ನವೆಂಬರ್ 12ರಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ಅರ್ಜಿ ಸಲ್ಲಿಸಿದ್ದಾರೆ. ದೂರರ್ಜಿಯನ್ನು 422/2026ನೇ ಸಂಖ್ಯೆಯಡಿ ಸ್ವೀಕರಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದು, ಮುಂದಿನ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.




