November 12, 2026

ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ವತಿಯಿಂದ ದೇಶದಲ್ಲಿ ಮೊದಲ ಬಾರಿಗೆ ಗೇರು ಮರದ ಚಿಗುರು ಮತ್ತು ಹೂಗಳಿಗೆ ಸಿಂಪಡಿಸುವ ತಂತ್ರಜ್ಞಾನ  ಉದ್ಘಾಟನೆ

0
image_editor_output_image-1138023201-1794492550176

ವಿಟ್ಲ: ಗೇರು ಮರದ ಚಿಗುರು ಮತ್ತು ಹೂಗಳಿಗೆ ಸಿಂಪಡಿಸುವ ತಂತ್ರಜ್ಞಾನಕ್ಕೆ ಚಾಲನೆ
ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಇದೀಗ  ಒಂದು ಮಹತ್ತರವಾದ ಮೈಲುಗಲ್ಲನ್ನು ಸ್ಥಾಪಿಸಿದೆ. ಇಂದು ಬಿಡುಗಡೆ ಮಾಡಿರುವ ಪ್ರೋಡೆಕ್ಟ್ ಗೇರು ಬೆಳೆಗಾರರಿಗೆ ಬಹಳಷ್ಟು ಸಹಕಾರಿಯಾಗಲಿದೆ. ಭೂಮಿಯಲ್ಲಿ ನೀರಿನ ಅಂಶ ಕಡಿಮೆಯಾದಾಗ ನೀರು ಸಿಂಪಡಿಸಿದರೆ ಹೆಚ್ಚಿನ ಇಳುವರಿ ಸಿಗಲು ಸಾಧ್ಯ. ಗೇರು ಬೇಳೆ ಲಾಭದಾಯಕ ಬೆಳೆಯಾಗಿದ್ದು, ಅದು  ಇನ್ನಷ್ಟು ಅಧಿಕವಾಗಲಿ ಎಂದು  ಗೇರು ಸಂಶೋಧನಾ ನಿರ್ದೇಶನಾಲಯ ಐಸಿಎಆರ್ -ಡಿಸಿಆರ್ ಪುತ್ತೂರು ಇದರ ನಿರ್ದೇಶಕರಾದ ಡಾ. ಜೆ. ದಿನಕರ ಅಡಿಗರವರು ಹೇಳಿದರು.
ಅವರು  ವಿಟ್ಲದ ಚಂದಳಿಕೆ ಯಲ್ಲಿರುವ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ಕಚೇರಿಯಲ್ಲಿ ನ.೧೨ರಂದು  ಐಸಿಎಆರ್-ಡಿಸಿಅರ್, ಪುತ್ತೂರು,  ಆರ್‌ಕೆವಿವೈ-ರಫ್ತಾರ್ ಯೋಜನೆ, ಕರ್ನಾಟಕ ಸರ್ಕಾರ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ವತಿಯಿಂದ ನಡೆದ ಭಾರತದ ದೇಶದಲ್ಲಿ ಮೊದಲ ಬಾರಿಗೆ ಗೇರು ಮರದ ಚಿಗುರು ಮತ್ತು ಹೂಗಳಿಗೆ ಸಿಂಪಡಿಸುವ ತಂತ್ರಜ್ಞಾನವನ್ನು  ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತದ ಅಧ್ಯಕ್ಷರಾದ ಎಂ. ಪ್ರಸಾದ್ ಶೆಟ್ಟಿ ರವರು ಮಾತನಾಡಿ ಗೇರು ಸ್ಪೆಷಲ್ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕೆಲಸವಾಗಬೇಕಿದೆ. ಅಡಿಕೆ ಬೆಳೆಗಳ ರೋಗಗಳು ಇಂದು ಸಂಪೂರ್ಣ ಹತೋಟಿಗೆ ತರುವಲ್ಲಿ ರೈತರು ವಿ಼ಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ರೈತರು ಗೇರು ಕೃಷಿಯತ್ತ ಹೆಚ್ಚು ಒಲವು ತೋರುವಂತಾಗಬೇಕು.
ಇದೊಂದು ರೈತರಿಗೆ ಆದಾಯ ತರುವ ಯೋಜನೆಯಾಗಿದೆ ಎಂದರು.

ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ.ವೀಣಾ ಜಿ.ಎಲ್., ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ವಿಜ್ಞಾನಿ ಡಾ. ಅಶ್ವಥಿ ಚಂದ್ರಕುಮಾರ್ ರವರು ಮಾತನಾಡಿದರು. ಸಂಸ್ಥೆಯ ಸಿಬ್ಬಂದಿ ನಿಶಾಮೋಹಿನಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!