ಬಿಸಿರೋಡಿನಲ್ಲಿ ಸರಣಿ ಅಪಘಾತ : ಮೂರು ವಾಹನಗಳು ಜಖಂ

ಬಂಟ್ವಾಳ: ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ವಾಹನಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿ ಜಖಂಗೊಂಡಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯವಾಗದೆ, ಅಪಾಯವಿಲ್ಲದೆ ಪಾರಾಗಿದ್ದಾರೆ.
ಲಾರಿ ,ಮಿನಿಬಸ್ ಹಾಗೂ ಕಾರು ಈ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ, ವಾಹನಗಳಿಗೆ ಡ್ಯಾಮೇಜ್ ಆಗಿದೆ.
ಮಂಗಳೂರು ಕಡೆಯಿಂದ ಕಬ್ಬಿಣದ ವಸ್ತುಗಳನ್ನು ತರುತ್ತಿದ್ದ ಲಾರಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ಮಿನಿಬಸ್ ಲಾರಿಗೆ ಡಿಕ್ಕಿಯಾಗಿದೆ, ಲಾರಿಯಲ್ಲಿ ವ್ಯಾಪ್ತಿ ಮೀರಿ ಹೊರಗಡೆಯಲ್ಲಿದ್ದ ಕಬ್ಬಿಣದ ಲೋಡ್ ಬಸ್ ನ ಗಾಜು ಒಡೆದಿದೆ, ಅದೃಷ್ಟವಶಾತ್ ಮಿನಿಬಸ್ ನಲ್ಲಿದ್ದ ಪ್ರಯಾಣಿಕರಿಗೆ ಇದರಿಂದ ಅಪಾಯವಾಗದೆ ಪಾರಾಗಿದ್ದಾರೆ.
ಇದೇ ಸಂದರ್ಭದಲ್ಲಿ ಬರುತ್ತಿದ್ದ ಕಾರೊಂದಕ್ಕೆ ಲಾರಿ ಡಿಕ್ಕಿಯಾಗಿದ್ದು,ಕಾರಿನ ಒಂದು ಭಾಗ ಸಂಪೂರ್ಣ ಜಖಂಗೊಂಡಿದೆ.
ಅಪಘಾತದಿಂದ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಲ ಹೊತ್ತಿನವರೆಗೆ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.
ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಆಗಮಿಸಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.
