ಮಂಗಳೂರು: MDMA ಡ್ರಗ್ಸ್ ಸಹಿತ ಆರೋಪಿಯ ಬಂಧನ

ಮಂಗಳೂರು: ಎಂಡಿಎಂಎ ಡ್ರಗ್ಸ್ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಮಂಗಳೂರಿನ ವಾಮಂಜೂರು ಮೈದಾನದಲ್ಲಿರುವ ಶೇಂದಿ ಅಂಗಡಿ ಬಳಿ ನಡೆದಿದ್ದು, ಪೆರ್ಮನ್ನೂರ ಗ್ರಾಮ ನಿತ್ಯಾಧರ ಚರ್ಚ್ ಬಳಿ ದಾರಂದ ಬಾಗಿಲು ಮನೆ ನಿವಾಸಿ ದಾವೂದು ಪರ್ವೇಜ್(37)ನನ್ನು ಬಂಧಿಸಲಾಗಿದೆ.
ನಿಷೇಧಿತ ಮಾದಕ ವಸ್ತು ಸುಮಾರು 10 ಗ್ರಾಂ ತೂಕದ ಅಂದಾಜು 15,000 ರೂ. ಮೌಲ್ಯದ ಎಂಡಿಎಂಎ ಹಾಗೂ ಹಾಗೂ 810 ರೂ ನಗದನ್ನು ವಶಕ್ಕೆ ಪಡೆಯಲಾಗಿದೆ.