ನರೇಂದ್ರ ಮೋದಿ ಎರಡು ನಾಲಿಗೆಯ ಹಾವು: ನಟ ಪ್ರಕಾಶ್ ರಾಜ್
ಬೆಳಗಾವಿ: ಒಂದೇ ಭಾಷೆ, ಒಂದೇ ಪಕ್ಷ, ಒಬ್ಬನೇ ಮಹಾಪ್ರಭು ಎನ್ನುತ್ತಿರುವ ಮಹಾಪ್ರಭು ಎರಡು ನಾಲಿಗೆಯ ಹಾವು ಇದ್ದಂತೆ. ಸುಳ್ಳುಗಳ ಮಹಾಪುರಾಣ ಹೇಳುವ ಈ ಸರ್ವಾಧಿಕಾರಿ, ದುರಹಂಕಾರಿಯನ್ನು ಕೆಳಗಿಳಿಸಬೇಕು ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ ರಾಜ್ ವಾಗ್ಧಾಳಿ ನಡೆಸಿದರು.
ದೇಶ ಉಳಿಸಿ ಸಂಕಲ್ಪ ಯಾತ್ರೆ ಸಮಾರೋಪದಲ್ಲಿ ಮಾತನಾಡಿದ ಅವರು, ಮಹಾಪ್ರಭುವಿನ ನಗ್ನತೆಯನ್ನು ಬಿಚ್ಚಿಡುತ್ತೇನೆ. ನಿಜವಾದ ದೇಶ ಭಕ್ತರಾದರೆ, ನಿಜವಾದ ಮನುಷ್ಯರಾದರೆ ಸರ್ವಾಧಿಕಾರಿಯನ್ನು ಇಳಿಸುವ ಜವಾಬ್ದಾರಿ ನಿಮ್ಮೆಲ್ಲರದ್ದಾಗಿದೆ. ಮಹಾಪ್ರಭುಗಳು ಶಾಶ್ವತ ಅಲ್ಲ. ಸರ್ವಾ ಧಿಕಾರಿಯ ಮೊದಲ ಲಕ್ಷಣ ಬಹಳ ಚೆನ್ನಾಗಿ ಕಾಣಿಸುವುದು. ಈ ಮಹಾಪ್ರಭು ಅಹಂಕಾರದ ತುತ್ತ ತುದಿಯಲ್ಲಿ ನಿಂತಿದ್ದಾರೆ.
ಭ್ರಷ್ಟಾಚಾರ ಮಾಡಿದವರು ಆ ಪಕ್ಷಕ್ಕೆ ಸೇರಿ ಸಾಚಾಗಳಾಗುತ್ತಾರೆ. ನಾಚಿಕೆಗೆಟ್ಟ ದುರಹಂಕಾರಿ ಪಕ್ಷ ಬಿಜೆಪಿ. ನಮ್ಮ ನಾಡಿಗೆ ನಮ್ಮ ನಾಯಕ ಬೇಕು. ಆ ಮುಖ ನೋಡಿ ಮತ ಹಾಕಿದರೆ ಕಂಗನಾ ರಣಾವತ್‌ಗೆ ವೋಟ್ ಹಾಕಿದಂತಾಗುತ್ತದೆ ಎಂದರು.




