March 24, 2026

ಮಂಗಳೂರು: ರೈಲ್ವೇ ಸೇತುವೆ ಬಳಿ ವಾಕಿಂಗ್ ತೆರಳಿದ್ದ ವ್ಯಕ್ತಿ ನಾಪತ್ತೆ

0
image_editor_output_image780168043-1712620055603.jpg

ಮಂಗಳೂರು: ನಗರದ ಅತ್ತಾವರ ನಿವಾಸಿ ವಿಕಾಸ್‌ ಎಸ್‌. (26) ಎ. 5ರಂದು ಸಂಜೆ 4 ಗಂಟೆಗೆ ಸಂಬಂಧಿಯ ಜತೆ ವಾಕಿಂಗ್‌ ಹೋದವರು ಬಳಿಕ ಮಾರ್ಗನ್ಸ್‌ ಗೇಟ್‌ ರೈಲ್ವೇ ಸೇತುವೆ ಬಳಿ ನಾಪತ್ತೆಯಾಗಿದ್ದಾರೆ ಎಂದು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

5.6 ಅಡಿ ಎತ್ತರ, ಕೋಲು ಮುಖ, ಬಿಳಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕನ್ನಡ, ಇಂಗ್ಲಿಷ್‌, ತುಳು ಮತ್ತು ತಮಿಳು ಭಾಷೆ ಮಾತನಾಡುತ್ತಾರೆ. ನೀಲಿ ಬಣ್ಣದ ಟೀ ಶರ್ಟ್‌ ಹಾಗೂ ಕಂದು ಬಣ್ಣದ ಪ್ಯಾಂಟ್‌ ಧರಿಸಿದ್ದರು. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!