December 15, 2025

ಸಿನಿಮಾ ಚಿತ್ರೀಕರಣದ ವೇಳೆ  ಬಂದೂಕಿನಿಂದ ಹಾರಿದ ಗುಂಡು:
ಛಾಯಾಗ್ರಾಹಕಿ ಬಲಿ

0
image_editor_output_image1891634034-1634878504323.jpg

ಲಾಸ್‌ ಏಂಜಲೀಸ್‌: ಸಿನಿಮಾ ಚಿತ್ರೀಕರಣದ ವೇಳೆ ಅಮೆರಿಕದ ನಟ ಆಲೆಕ್‌ ಬಾಲ್ಡ್‌ವಿನ್‌ ಬಳಸುತ್ತಿದ್ದ ಬಂದೂಕಿನಿಂದ ಹಾರಿದ ಗುಂಡು ಛಾಯಾಗ್ರಾಹಕಿಯನ್ನು ಬಲಿ ಪಡೆದಿದೆ.

ನ್ಯೂ ಮೆಕ್ಸಿಕೊದಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಈ ದುರ್ಘಟನೆ ನಡೆದಿರುವುದಾಗಿ ಅಮೆರಿಕದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

‘ರಸ್ಟ್‌’ (Rust) ಹೆಸರಿನ ಸಿನಿಮಾ ಚಿತ್ರೀಕರಣದಲ್ಲಿ ಪಾರ್ಪಟಿ ಗನ್‌ನಿಂದ ನಟ ಬಾಲ್ಡ್‌ವಿನ್‌ ಸಿಡಿಸಿದ ಗುಂಡು ಒಬ್ಬರ ಸಾವಿಗೆ ಕಾರಣವಾಗಿದೆ. ಈ ಘಟನೆಯಲ್ಲಿ ಛಾಯಾಗ್ರಾಹಕಿ ಹಲಿನಾ ಹಚಿನ್ಸ್‌ (42) ಸಾವಿಗೀಡಾದರೆ, ನಿರ್ದೇಶಕ ಜೋಲ್‌ ಸೌಜಾ (48) ಗಾಯಗೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!