ಮೈಸೂರು: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಕೊಲೆ

ಮೈಸೂರು: ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದೆ. ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ ನಡೆದ ಘಟನೆ ಮೈಸೂರಿನ ಶ್ರೀನಗರದಲ್ಲಿ ನಡೆದಿದೆ.
ಕೆ.ಜಿ ಕೊಪ್ಪಲು ನಿವಾಸಿ ಶಿವಪ್ರಕಾಶ್ (56) ಮತ್ತು ಶ್ರೀನಗರದ ನಿವಾಸಿ ಲತಾ (48) ಕೊಲೆಯಾದವರು. ಕೊಲೆಗೈದ ಆರೋಪಿ ಸಾಗರ್ ನಾಪತ್ತೆಯಾಗಿದ್ದಾನೆ.
ಲತಾ ಮನೆಗೆ ನುಗ್ಗಿದ್ದ ಸಾಗರ್ ಮಚ್ಚಿನಿಂದ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಮೊದಲು ತಂದೆಯನ್ನು ಕೊಲೆ ಮಾಡಿದ ಸಾಗರ್ ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ.