January 31, 2026

ವಿಟ್ಲ: ತೋಟದ ಬಳಿ ಕೋಳಿ ಅಂಕ ಜೂಜಾಟ: ನಾಲ್ವರ ಬಂಧನ

0
IMG-20260125-WA0022.jpg

ವಿಟ್ಲ: ದಿನಾಂಕ 25.01.2026 ರಂದು ಮಧ್ಯಾಹ್ನ 13:20 ಗಂಟೆಗೆ ವಿಟ್ಲ ಪೊಲೀಸ್ ಠಾಣಾ ಉಪನಿರೀಕ್ಷಕ ರಾಮಕೃಷ್ಣ ರವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ವಿಟ್ಲಮುಡ್ನೂರು ಗ್ರಾಮದ ಎಲ್ಯಣ್ಣ ಪೂಜಾರಿಯವರ ತೋಟದ ಬಳಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿತು.

ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದಾಗ, ಸುಮಾರು 14:00 ಗಂಟೆಗೆ ಕೋಳಿ ಅಂಕ ಜೂಜಾಟ ನಡೆಯುತ್ತಿರುವುದು ಕಂಡುಬಂದಿದ್ದು ಪೊಲೀಸರು ಬಂದಿರುವುದನ್ನು ಕಂಡು ಕೆಲವರು ಓಡಿ ಹೋಗಿದ್ದು, ಮಹೇಶ್, ಬಾಬು, ಆನಂದ ಹಾಗೂ ಅಣ್ಣು ಎಂಬ ನಾಲ್ವರನ್ನು ಸ್ಥಳದಲ್ಲೇ ಹಿಡಿಯಲಾಗಿದೆ ಅಲ್ಲಿ ಸಿಕ್ಕಿರುವ ನಗದು ರೂಪಾಯಿ 4390 ಮತ್ತು 8 ಹುಂಜಗಳ ಅಂದಾಜು ಮೌಲ್ಯ ಒಟ್ಟು 4550/- ರೂ, 10 ಕೋಳಿ ಬಾಳುಗಳ ಅಂದಾಜು ಮೌಲ್ಯ ಒಟ್ಟು 500/- ರೂ ಆಗಬಹುದು, ಇವುಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಸ್ವಾಧೀನಪಡಿಸಿಕೊಂಡು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 15/2026 Sec.87, 93 KP Act, 3, 11 Cruelty to Animal Act ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!