March 21, 2026

ಬಾಲಿವುಡ್ ನಟಿ ಪೂನಂ ಪಾಂಡೆ ನಿಧನ

0
IMG-20240202-WA0001.jpg



ಮುಂಬೈ: ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟಿ, ಮಾಡೆಲ್ ಪೂನಂ ಪಾಂಡೆ(32) ಗುರುವಾರ ತಡರಾತ್ರಿ ಕಾನ್ಪುರದಲ್ಲಿ ಹಠಾತ್ ನಿಧನರಾಗಿದ್ದಾರೆ.

ನಟಿಯ ನಿಧನದ ವಿಷಯವನ್ನು ಅವರ ಮ್ಯಾನೇಜರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ. “ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಕಳೆದುಕೊಂಡಿದ್ದೇವೆ. ಈ ದುಃಖದ ಸಂದರ್ಭದಲ್ಲಿ ನಮಗೆ ಪ್ರೈವೆಸಿ ನೀಡಿ” ಎಂದು ನಟಿ ಪೂನಂ ಪಾಂಡೆ ತಂಡ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದೆ.

ನಟಿ ಪೂನಂ ಪಾಂಡೆ 2013 ರ ‘ನಶಾ’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ಅವರು ’ಲವ್ ಈಸ್ ಪಾಯಿಸನ್’ ಎಂಬ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ಪೂನಂ ಹಿಂದಿ ಕನ್ನಡ ಅಷ್ಟೇ ಅಲ್ಲದೇ ತೆಲುಗು, ಬೋಜ್ ಪುರಿ ಸಿನಿಮಾಗಳಲ್ಲೂ ನಟಿಸಿದ್ದಾರೆ. 2018 ರಲ್ಲಿ ಬಿಡುಗಡೆಯಾದ ’ದಿ ಜರ್ಜಿ ಆಫ್ ಕರ್ಮ’ ಅವರ ಕೊನೆಯ ಸಿನಿಮಾವಾಗಿದ್ದು, ಆ ನಂತರ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!