ವೀಡಿಯೋ ಮಾಡಿಟ್ಟು ದಂಪತಿ ಆತ್ಮಹತ್ಯೆ
ಮೈಸೂರು: ಸ್ನೇಹಿತನೊಬ್ಬನಿಗೆ ಕೊಡಿಸಿದ್ದ ಸಾಲವನ್ನು ಆತ ಮರುಪಾವತಿ ಮಾಡದ ಕಾರಣ ವೀಡಿಯೋ ಮಾಡಿಟ್ಟು ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಯರಗನಹಳ್ಳಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದಂಪತಿಯನ್ನು ವಿಶ್ವ (34), ಸುಷ್ಮ (28) ಎಂದು ಗುರುತಿಸಲಾಗಿದೆ. ದಂಪತಿ ಶಿವು ಎಂಬಾತನಿಗೆ ಬೇರೊಬ್ಬರಿಂದ 5 ಲಕ್ಷ ರೂ. ಸಾಲ ಕೊಡಿಸಿದ್ದರು.
ಈ ಸಾಲವನ್ನು ಶಿವು ತೀರಿಸಿರಲಿಲ್ಲ. ಸಾಲಕೊಟ್ಟವರು ಹಣ ಕೊಡುವಂತೆ ವಿಶ್ವನನ್ನು ಕೇಳುತ್ತಿದ್ದರು ಎಂದು ತಿಳಿದು ಬಂದಿದೆ