November 24, 2026

ಶುದ್ಧ ನೀರು ಎಂದು ಕುಡಿಯುವ ಬಿಸ್ಲರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆ

0
image_editor_output_image-1916048257-1795497590223

ನವದೆಹಲಿ, ನ.23: ಶುದ್ಧ ನೀರು ಎಂದು ಕುಡಿಯುವbಬಿಸ್ಲರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕ ಪತ್ತೆಯಾಗಿದೆ. ಹೀಗಾಗಿ ‘ಬಿಸ್ಲಿರಿ ಇಂಟರ್‌ನ್ಯಾಷನಲ್’ ಸಂಸ್ಥೆಯ ಕುಡಿಯುವ ನೀರಿನ ಮಾದರಿಯು ಕುಡಿಯಲು ಅಸುರಕ್ಷಿತ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದ್ದಲ್ಲದೆ, ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ (FSS Act, 2006) ನೀರಿನ ಪೂರೈಕೆಗೆ ಸಂಬಂಧಿಸಿದ ಉಲ್ಲಂಘನೆಗಳಿಗಾಗಿ ಕಂಪನಿಯ ವಿರುದ್ಧ ಕ್ರಮಕ್ಕೆ ಮುಂದಾಗಿರುವುದಾಗಿ ಎಫ್‌ಎಸ್‌ಎಸ್‌ಎಐ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಬಿಸ್ಲಿರಿ ಇಂಟರ್‌ನ್ಯಾಶನಲ್ ಗೋವಾ ಘಟಕದಿಂದ ‘ಪ್ಯಾಕೇಜ್ ಕುಡಿಯುವ ನೀರು ಮಾದರಿಯನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು. 2025ರಲ್ಲಿ ಸಂಗ್ರಹಿಸಿದ ಮಾದರಿಯಲ್ಲಿ ಬೋಮೇಟ್ ಅಂಶ ಹೆಚ್ಚಿರುವುದು ಪತ್ತೆಯಾಗಿದ್ದರಿಂದ ಕುಡಿಯಲು ಅಸುರಕ್ಷಿತ ಎಂದು ಘೋಷಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕಂಪನಿಯು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷೆಗಾಗಿ ಮಾದರಿಯನ್ನು ರೆಫರಲ್ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ಪರೀಕ್ಷೆಯಲ್ಲೂ ನೀರಿನಲ್ಲಿ ಪಾಲಿನ್ಯೂಕ್ಲಿಯ‌ರ್ ಆರೊಮ್ಯಾಟಿಕ್ ಹೈಡೋಕಾರ್ಬನ್‌ಗಳು ಇರುವುದು

Leave a Reply

Your email address will not be published. Required fields are marked *

error: Content is protected !!