November 24, 2026

ಕಾಸರಗೋಡು: ಕಾರು, ಬೈಕ್ ನಡುವೆ ಭೀಕರ ಅಪಘಾತ: ಯುವಕ ಮೃತ್ಯು

0
image_editor_output_image-427101240-1795490217166

ಕಾಸರಗೋಡು: ನಾಲ್ಕನೇ ಮೈಲು ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.

ಕಳನಾಡ್ ವಳ್ಳಿಯೋಡ್ ನಿವಾಸಿ ಅಶ್ರಫ್ ಮಯ್ಯ ಅವರ ಪುತ್ರ ಆದಿಲ್ ಅಹಮ್ಮದ್ (20) ಸಾವನ್ನಪ್ಪಿದ ದುರ್ದೈವಿ. ಅಪಘಾತದಲ್ಲಿ ಸಹ ಸವಾರ ಬೀಜಂತಡುಕ್ಕದ ಬಿ. ಮುಹಮ್ಮದ್ ಆದಿಲ್ ಕೂಡ ಗಾಯಗೊಂಡಿದ್ದಾರೆ. ಕಳೆದ ಶುಕ್ರವಾರ ಚೆಂಗಳ ನಾಲ್ಕನೇ ಮೈಲಿನ ಯೂಸ್ಡ್ ಕಾರ್ ಶೋರೂಮ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.

ನಾಲ್ಕನೇ ಮೈಲಿನಿಂದ ಚೆಂಗಳ ಕಡೆಗೆ ತೆರಳುತ್ತಿದ್ದ ಬೈಕ್ ಗೆ ಎದುರುಗಡೆಯಿಂದ ಬಂದ ಕಾರು ಸೂಚನೆ ನೀಡದೆ ಬಲಕ್ಕೆ ತಿರುಗಿದಾಗ ಡಿಕ್ಕಿಯಾಗಿದೆ ಎನ್ನಲಾಗಿದೆ. ಬೈಕ್ ಹಿಂಬದಿ ಸವಾರರಾಗಿದ್ದ ಆದಿಲ್ ಅವರನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!