March 20, 2026

ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ: ಓರ್ವ ಪೊಲೀಸರ ವಶಕ್ಕೆ

0
IMG-20240119-WA0012.jpg


 
ಉಳ್ಳಾಲ: ಉಳ್ಳಾಲ ಠಾಣಾ ವ್ಯಾಪ್ತಿಯ ಕೋಟೆಪುರದ ಬೃಹತ್ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ಧನ್ಯ ನಾಯಕ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿದೆ. ಈ ವೇಳೆ ಆರೋಪಿ ಸಮೇತ ಅಪಾರ ಪ್ರಮಾಣದ ಗ್ಯಾಸ್ ಸಿಲಿಂಡರ್ ಗಳನ್ನ ವಶಪಡಿಸಿದ್ದಲ್ಲದೆ,ಅಕ್ರಮವಾಗಿ ಮಾರಾಟ ನಡೆಸುತ್ತಿದ್ದ ಲೀಟರ್ ಗಟ್ಟಲೆ ಪೆಟ್ರೋಲನ್ನೂ ವಶಪಡಿಸಿಕೊಂಡಿದೆ.

ಉಳ್ಳಾಲ ಕೋಟೆಪುರದ ಬರಕ ಫ್ಯಾಕ್ಟರಿ ಮುಂಭಾಗದ ರಸ್ತೆ ಬದಿಯ ಮನೆಯೊಂದರಲ್ಲೇ ನಡೆಯುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಗೆ ದಾಳಿ ನಡೆಸಿ ಆರೋಪಿ ಅಬ್ದುಲ್ ಅಲ್ತಾಫ್ (49)ನನ್ನ ಬಂಧಿಸಿದೆ.

ಕೋಟೆಪುರದ ರಸ್ತೆ ಬದಿಯ ಮನೆಯಲ್ಲೇ ತೋರ್ಪಡಿಕೆಗೆ ಗುಜರಿ ಅಂಗಡಿ ನಡೆಸುತ್ತಿದ್ದ ಆರೋಪಿ ಅಲ್ತಾಪ್ ಮನೆಯೊಳಗಿನ ವಿಶಾಲ ಪ್ರದೇಶದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಗಳನ್ನ ದಾಸ್ತಾನು ಇರಿಸಿ ರೀಫಿಲ್ಲಿಂಗ್ ಮಾಡುತ್ತಿದ್ದ ಎನ್ನಲಾಗಿದೆ.

ಇಷ್ಟಲ್ಲದೆ ಸ್ಥಳೀಯ ನಾಡ ದೋಣಿಗಾರರಿಗೆ ದುಪ್ಪಟ್ಟು ದರದಲ್ಲಿ ಪೆಟ್ರೋಲನ್ನು ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿಯನ್ವಯ ಎಸಿಪಿ ಧನ್ಯ ನಾಯಕ್ ಸಮೇತ ಸಿಬ್ಬಂದಿಗಳಾದ ರಿಜಿ, ಸಾಜು ನಾಯರ್,ಮಹೇಶ್, ಅಕ್ಬರ್ ನೇತೃತ್ವದ ತಂಡ ಗುರುವಾರದಂದು ದಿಢೀರ್ ದಾಳಿ ನಡೆಸಿದ್ದು ಸುಮಾರು 55 ಕ್ಕೂ ಮಿಕ್ಕಿದ ಗ್ಯಾಸ್ ಸಿಲಿಂಡರ್ ಮತ್ತು 280 ಲೀಟರ್ ನಷ್ಟುh ಅಕ್ರಮ ದಾಸ್ತಾನು ಇರಿಸಿದ್ದ ಪೆಟ್ರೋಲನ್ನ ವಶಪಡಿಸಿದ್ದು ,ಆರೋಪಿ ಯನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!