ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಸ್ವಇಚ್ಛೆಯಿಂದ ಹಿಂದೂಗಳಿಗೆ ಹಸ್ತಾಂತರಿಸಬೇಕು: ಕೆ.ಕೆ. ಮುಹಮ್ಮದ್
ದಿಲ್ಲಿ: ವಾರಣಾಸಿ, ಮಥುರಾ ಮಸೀದಿಗಳನ್ನೂ ಕೂಡ ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಲು ಮುಸ್ಲಿಂ ಸಮುದಾಯ ಸಿದ್ಧರಾಗಿರಬೇಕು ಎಂದು ಪುರಾತತ್ವಶಾಸ್ತ್ರಜ್ಞ ಕೆಕೆ. ಮುಹಮ್ಮದ್ ಹೇಳಿದ್ದಾರೆ.
ಪತ್ರಿಕೆಯೊಂದು ನಡೆಸಿದ್ದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಮುಸ್ಲಿಮರು ಜ್ಞಾನವಾಪಿ ಮತ್ತು ಮಥುರಾ ಮಸೀದಿಗಳನ್ನು ಹಿಂದೂಗಳಿಗೆ ಸ್ವಇಚ್ಛೆಯಿಂದ ಹಸ್ತಾಂತರಿಸಬೇಕು. ಇದರಿಂದ ಈಗಾಗಲೇ ಆಗಿರುವ ಗಾಯಗಳೂ ಮಾಸಿ ಹೋಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯಾದ ವಿವಾದಿತ ಸ್ಥಳದಲ್ಲಿ ದೇವಸ್ಥಾನವಿತ್ತು ಎಂದು ಬಲವಾಗಿ ಪ್ರತಿಪಾದಿಸಿದ್ದವರಲ್ಲಿ ಕೆ.ಕೆ. ಮುಹಮ್ಮದ್ ಪ್ರಮುಖರಾಗಿದ್ದು, ಇವರು ಬಾಬ್ರಿ ಮಸೀದಿ ಸ್ಥಳವನ್ನು ಉತ್ಖನನ ಮಾಡಿದ ಭಾರತೀಯ ಪುರಾತತ್ವ ಸರ್ವೇಕ್ಷಣಾ ತಂಡದ ಭಾಗವಾಗಿದ್ದರು.





