December 19, 2025

ಮಂಗಳೂರು: ನ್ಯಾಯ ಬೆಲೆ ಅಂಗಡಿ ಮಾಲಕನಿಂದ ಮುಸ್ಲಿಮ್ ವ್ಯಕ್ತಿಗೆ ನಿಂದನೆ: ದೂರು ದಾಖಲು

0
image_editor_output_image-1340001408-1705561118758.jpg

ಮಂಗಳೂರು: ಅಕ್ಕಿ ತರಲು ಹೋಗಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರನ್ನು ನ್ಯಾಯ ಬೆಲೆ ಅಂಗಡಿ ಮಾಲೀಕ ಧರ್ಮ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಗರದ ಬೋಳಾರ್ ನಿವಾಸಿ ಮೊಹಮ್ಮದ್ ಮೆಹರಾಜ್ ಎಂಬವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದಿನಾಂಕ 16-01-2024ರ ಮಂಗಳವಾರದಂದು ಪಾಂಡೇಶ್ವರ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಅಕ್ಕಿ ತರಲು ತೆರಳಿದ್ದ ವೇಳೆ ಅಂಗಡಿ ಮಾಲೀಕ ಬಿ. ಕೇಶವ್ ಮೂರ್ತಿ ಅವರು ತನ್ನ ಧರ್ಮವನ್ನು ಅವಹೇಳನ ಮಾಡಿ, ಅವಾಚ್ಯವಾಗಿ ನಿಂದಿಸಿ ಕುರ್ಚಿಯಲ್ಲಿ ಹಲ್ಲೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

`ಏಯ್ ಬ್ಯಾರಿ … ಮಗ, ನಿನ್ನ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇನೆ ಎಂದು ನನಗೆ ಮತ್ತು ನನ್ನ ಪತ್ನಿಗೆ ಧಮ್ಕಿ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮೆಹರಾಜ್ ಅವರು ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!