ಮಡಿಕೇರಿ: ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘಾತ: ಓರ್ವ ಸಾವು, ಮೂವರು ಗಂಭೀರ

ಮಡಿಕೇರಿ: ಶಬರಿಮಲೆ ಅಯ್ಯಪ್ಪ ಭಕ್ತರಿದ್ದ ಕಾರು ಅಪಘತವಾಗಿ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ಅಂಗಮಾಲಿ ಪೆರುಂಬರ್ ಬಳಿ ನಡೆದಿದೆ.
ಕೊಡಗು ಜಿಲ್ಲೆ ಕುಶಾಲನಗರದ ಹಾರಂಗಿ ದೊಡ್ಡತ್ತೂರು ನಿವಾಸಿ ರಾಮ ಎಂಬವರ ಪುತ್ರ ಚಂದ್ರ ಮೃತರು.
ಶಬರಿಮಲೆಗೆ ಹೋಗಿ ಅಲ್ಲಿಂದ ವಾಪಸ್ಸು ಆಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕುಶಾಲನಗರದ ಲಿಂಗಂ, ಹರೀಶ್ ಹಾಗೂ ಸಂತೋಷ್ ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಪೆರಂಬೂರಿನ ರಾಜಗಿರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.