February 3, 2026

ರಾಜ್ಯದ 63 ಕಡೆ ಲೋಕಾಯುಕ್ತ ಪೊಲೀಸರ ದಾಳಿ: ನಗದು ಸಹಿತ ಕೆಜಿ ಕೆಜಿ‌ ಚಿನ್ನ ವಶ

0
image_editor_output_image73819980-1701755328710.jpg

ಬೆಂಗಳೂರು: ನಗರದ ಮೂವರು ಅಧಿಕಾರಿಗಳು ಸೇರಿದಂತೆ ರಾಜ್ಯದ 63 ಕಡೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.

ಬೆಂಗಳೂರಿನ ಬೆಸ್ಕಾಂ ಜಯನಗರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಕೇಶವ, ಬೆಸ್ಕಾಂ ವಿಚಕ್ಷಣಾ ದಳದ ಕಾರ್ಯನಿರ್ವಾಹಕ ಎಂಜಿನಿಯರ್ ಸುಧಾಕರ್ ರೆಡ್ಡಿ, ಕಣಿಮಿಣಿಕೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಸ್. ಕೃಷ್ಣಮೂರ್ತಿ ಅವರ‌ ಮನೆ ಹಾಗೂ ಇತರೆ ಸ್ಥಳಗಳ ಮೇಲೆ ದಾಳಿ‌ ನಡೆದಿದೆ.

ಲೋಕಾಯುಕ್ತ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಚನ್ನಕೇಶವ್ ಮನೆಯಲ್ಲಿ , ₹6 ಲಕ್ಷ‌ ನಗದು, 3 ಕೆ.ಜಿ. ಚಿನ್ನ ಸೇರಿದಂತೆ ₹1.5 ಕೋಟಿ ಮೌಲ್ಯದ ವಸ್ತುಗಳನ್ನು ‌ಜಪ್ತಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!