August 19, 2026

ವಿಟ್ಲ: ರಾಯಲ್ ಅಕಾಡೆಮಿ 2ನೇ ಶಾಖೆ ಕಬಕದಲ್ಲಿ ಶುಭಾರಂಭ:

0
IMG-20260701-WA0016

ವಿಟ್ಲದ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ರಾಯಲ್ ಅಕಾಡೆಮಿ ಇದರ 2ನೇ ಶಾಖೆ ಕಬಕದ ದಾರುಲ್ ಇರ್ಷಾದ್ ಕಟ್ಟಡದಲ್ಲಿ ಸೋಮವಾರ ಶುಭಾರಂಭಗೊಂಡಿತು.


ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಸಂಸ್ಥೆಯನ್ನು ಉದ್ಘಾಟಿಸಿದರು

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಎಂ. ಫ್ರೆಂಡ್ಸ್   ಅಧ್ಯಕ್ಷ  ರಶೀದ್ ವಿಟ್ಲ  ವಿಟ್ಲ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಕಿರಣ್ ಕುಮಾರ್ ಬ್ರಹ್ಮಾವರ ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಮನಾಝಿರ್ ಮುಡಿಪು ,ಅಧ್ಯಕ್ಷ ಅಝೀಝ್ ಸನ, ಜ್ಞಾನ ಕಲಾ ಅಕಾಡಮಿ ಸ್ಥಾಪಕಿ ಟಿ.ಶುಷ್ಮಾ ,ಬ್ರಜೇಶ್ , ಪತ್ರಕರ್ತ ಮಹಮ್ಮದ್ ಅಲಿ ,ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬೂಬಕರ್ ಅನಿಲಕಟ್ಟೆ, ಉಬೈದ್ ವಿಟ್ಲ,

ಎಮಿರೇಟ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಝುಬೈರ್ ವಿಟ್ಲ ,ಮುಖ್ತಾರ್ ವಿಟ್ಲ, ವಿಟ್ಲ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ವಿ.ಎಚ್.ಅಶ್ರಫ್, ವಿಟ್ಲ , ಕೆ

ರಾಝಿಕ್  ರೋಯಲ್ ಬೆಂಗಳೂರು. ಹಮೀದ್, ತೌಸೀಫ್ ಎಂ.ಜಿ. ,ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿ ವಿಟ್ಲ ಶಾಖೆಯ ಮೆನೇಜರ್ ವೆಂಕಟರಮಣ,  ರಹೀಂ ಶಾನ್ ,ಹಾರಿಸ್ ಕಾನತಡ್ಕ ಮುಂತಾದವರು ಶುಭ ಹಾರೈಸಿದರು .

ವಿದ್ಯಾರ್ಥಿನಿಗಳಾದ . ರೋಯಲ್ ಅಕಾಡೆಮಿ ಪ್ರಾಂಶುಪಾಲೆ ಆಯಿಷಾ ತಾಹಿರಾ  ರೋಯಲ್ ಅಕಾಡೆಮಿ ನಡೆದು ಬಂದ ಹಾದಿ ಮತ್ತು ಸಾಧನೆಯನ್ನು ವಿವರಿಸಿದರು‌
ರೋಯಲ್ ಅಕಾಡಮಿ  ಸಂಚಾಲಕಿ ರಾಝಿಯಾ ಕೆ.ಎಸ್  ಸ್ವಾಗತಿಸಿದರು.
ಸಿಬಂಧಿ ಅಹ್ಸನಾ ವಂದಿಸಿದರು
ಸಾನಿಯಾ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!