March 26, 2026

ಗೋದಾಮಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ಅವಘಡ: ಐವರು ಕಾರ್ಮಿಕರು ಮೃತ್ಯು

0
image_editor_output_image-1740360347-1701758774953.jpg

ವಿಜಯಪುರ: ನಗರದ ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ‘ರಾಜ್ ಗುರು ಫುಡ್’ ಗೋದಾಮಿನ ಮೆಕ್ಕೆಜೋಳ ಸಂಸ್ಕರಣ ಘಟಕದಲ್ಲಿ ನಡೆದ ಅವಘಡದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ರಾತ್ರಿಯಡಿ ನಡೆದಿದ್ದು, ಇದುವರೆಗೆ ಐದು ಶವಗಳು ಪತ್ತೆಯಾಗಿವೆ.

ಬಿಹಾರ ಮೂಲದ ರಾಜೇಶಕುಮಾರ(25), ಶಂಭು ಮುಖಿಯಾ(26), ರಾಮ್ಜಿ ಮುಖಿಯಾ(29), ರಾಮ್ ಬಲಕ್(52) ಮತ್ತು ಲುಕೋ ಜಾಧವ್(45)ಎಂದು ಗುರುತಿಸಲಾಗಿದೆ.

ಮೆಕ್ಕೆಜೋಳದ ರಾಶಿಯಲ್ಲಿ ಇನ್ನೂ ಕೆಲವರು ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಆದರೆ, ಸಿಲುಕಿಕೊಂಡಿರುವ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕ್ಷೀಣಿಸಿದೆ.

ಸೋಮವಾರ ಸಂಜೆ 4.30ಕ್ಕೆ ಬೃಹತ್ ಟ್ಯಾಂಕ್ ಗಳು ನಿಗದಿಗಿಂತ ಹೆಚ್ಚಿನ ( ಓವರ್ ಲೋಡ್) ಬಾರ ತಾಳಲಾರದೇ ಸ್ಫೋಟಗೊಂಡು ಅವಘಡ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!