August 8, 2026

ಸಂಶುದ್ಧೀನ್ ಎಣ್ಮೂರವರಿಗೆ ಪ.ಗೋ ಪ್ರಶಸ್ತಿ

0
image_editor_output_image-830563575-1786187750835

ಮಂಗಳೂರು: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮೀಣ ಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೀಡಲಾಗುತ್ತಿರುವ  *ಪ.ಗೋ*. (*ಪದ್ಯಾಣ ಗೋಪಾಲಕೃಷ್ಣ*)2026 ನೆ ಸಾಲಿನ  ಪ್ರಶಸ್ತಿ ಗೆ *ಸಂಶುದ್ಧೀನ್ ಎಣ್ಮೂರು* ಆಯ್ಕೆಯಾಗಿದ್ದಾರೆ.


ದಕ್ಷಿಣ ಕನ್ನಡ,  ಉಡುಪಿ,ಉತ್ತರ ಕನ್ನಡ,ಕೊಡಗು, ಚಿಕ್ಕಮಗಳೂರು ಹಾಗೂ ಕಾಸರಗೋಡು ಜಿಲ್ಲೆಯ  ಕಾರ್ಯನಿರತ  ಪತ್ರಕರ್ತರಿಂದ  ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು.ಈ ಪೈಕಿ ಅತ್ಯುತ್ತಮ ಒಂದು ವರದಿಯನ್ನು ತೀರ್ಪುಗಾರರ ಸಮಿತಿ  ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಕಟಣೆ ತಿಳಿಸಿದೆ.


ವಾರ್ತಾಭಾರತಿ ಕನ್ನಡ ದೈನಿಕದ ಉಪ ಸಂಪಾದಕ ಸಂಶುದ್ಧೀನ್ ಎಣ್ಮೂರು ಅವರು *ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ನ ಗ್ರಾಮೀಣ ಭಾಗದ ಅವಕಾಶ ವಂಚಿತ ಜನರ ಸಮಸ್ಯೆಗಳ  ಬಗ್ಗೆ ಬೆಳಕು ಚೆಲ್ಲುವ ವರದಿ ಆಯ್ಕೆಯಾಗಿದೆ*. ಫೆ.7, 2025 ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾದ  ‘ಆದಿವಾಸಿಗಳ ಬಾಳಿನಲ್ಲಿ ಬೆಳಕಾಗುದೇ ರಾಜ್ಯ ಸರಕಾರದ ನೀತಿ’  ವಿಶೇಷ ವರದಿ 2026 ನೆ ಸಾಲಿನ ಪ.ಗೋ ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!