March 26, 2026

ಬಿ.ಸಿ.ರೋಡ್: ಬ್ಯಾಡ್ಮಿಂಟನ್ ಲೀಗ್ ಟೂರ್ನಮೆಂಟ್ – 2023: ಕೋಸ್ಟಲ್ ಸ್ಮ್ಯಾಶರ್ಸ್ ತಂಡಕ್ಕೆ ಚಾಂಪಿಯನ್ ಕಿರೀಟ

0
image_editor_output_image417504828-1701759037225.jpg

ಬಂಟ್ವಾಳ, ಡಿ. 4: ದಿ ಫ್ಲೋಟಿಂಗ್ ಶಟಲರ್ಸ್ ರೋಟರಿ ಇದರ ವತಿಯಿಂದ ಬಿ.ಸಿ.ರೋಡ್ ಕೈಕಂಬ ಸಮೀಪದ ಶ್ಯಾಡೋ ಸ್ಪೋರ್ಟ್ಸ್ ಅಕಾಡಮಿಯ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.3ರಂದು ನಡೆದ ದಿ ಫ್ಲೋಟಿಂಗ್ ಶಟಲರ್ಸ್ ಬ್ಯಾಡ್ಮಿಂಟನ್ ಲೀಗ್ ಟೂರ್ನಮೆಂಟ್ – 2023 ರಲ್ಲಿ ‘ಕೋಸ್ಟಲ್ ಸ್ಮ್ಯಾಶರ್ಸ್ ತಂಡ’ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಒಟ್ಟು 6 ಮಾಲಕತ್ವದ 30 ತಂಡಗಳು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದು ಉದ್ಯಮಿ ಕೋಸ್ಟಲ್ ವುಡ್, ಟಿಂಬರ್ ಆ್ಯಂಡ್ ಪ್ಲೈವುಡ್ ಮಾಲಕ ಮುಹಮ್ಮದ್ ಹನೀಫ್ ಅವರ ಮಾಲಕತ್ವದ ‘ಕೋಸ್ಟಲ್ ಸ್ಮ್ಯಾಶರ್ಸ್ ತಂಡ’ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ತಂಡದ ಮಾಲಕ ಮುಹಮ್ಮದ್ ಹನೀಫ್, ತಂಡದ ಮ್ಯಾನೇಜರ್ ನೌಸೀರ್ ಸಹಿತ ದೀಪಕ್, ಚೇತನ್, ನ್ಯೂಟನ್, ಅನ್ಶುಲ್, ಖಲೀಲ್, ಇಕ್ಬಾಲ್, ತಪೊಧನ್, ಋತುರಾಜ್ ಹಾಗೂ ನವಾಝ್ ಅವರು ತಂಡಗಳನ್ನು ಮುನ್ನಡೆಸಿದರು.

ಈ ವೇಳೆ ಮಾತನಾಡಿದ ಮುಹಮ್ಮದ್ ಹನೀಫ್, ನಮ್ಮ ತಂಡದ ಪ್ರತಿಯೊಂದು ಸದಸ್ಯರ ಉತ್ತಮ ಪ್ರದರ್ಶನದಿಂದ ನಮ್ಮ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಸಂತಸ ತಂದಿದೆ. ಕ್ರೀಡಾ ಪ್ರೇಮಿ ಶಮೀರ್ ಅವರು ಬಿ.ಸಿ.ರೋಡ್ ಕೈಕಂಬ ಸಮೀಪದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪ್ಪೊದ ಬಳಿ ಸುಸಜ್ಜಿತವಾದ ಅಂತರ್ ರಾಷ್ಟ್ರೀಯ ಮಟ್ಟದ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಯುವ ಕ್ರೀಡಾ ಪಟುಗಳಿಗೆ ಅಭ್ಯಾಸ ನಡೆಸಲು ಈ ಕ್ರೀಡಾಂಗಣ ಸೂಕ್ತವಾಗಿದೆ. ಯುವ ಕ್ರೀಡಾ ಪಟುಗಳಿಗೆ ಇಲ್ಲಿ ಅಭ್ಯಾಸ ನಡೆಸಿ ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬಹುದಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!